ಸುಂಟಿಕೊಪ್ಪ, ಅ 08: ಆರ್ಹ ಪಡಿತರ ಚೀಟಿದಾರರು ಅ.20ರೋಳಗೆ ಇಕೆವೈಸಿ ಮಾಡಿಸಿಕೊಂಡು ಪಡಿತರ ಚೀಟಿಯನ್ನು ಉಳಿಸಿಕೊಳ್ಳುವಂತೆ ಕುಶಾಲನಗರ ತಾಲ್ಲೂಕು ಆಹಾರ ನಿರೀಕ್ಷಕರಾದ ಸ್ವಾತಿ ಅವರು ಹೇಳಿದರು.
ಇಲ್ಲಿನ ವೇವ್ ಸಂಘಟನೆಯವರು ನ್ಯಾಯಬೆಲೆ ಅಂಗಡಿಗಳಲ್ಲಿ ಆಗುತ್ತಿರುವ ಗಣಕ ಯಂತ್ರಗಳಲ್ಲಿ ವಿಳಂಬ ಧೋರಣೆ ಸಮಸ್ಯೆಯ ಬಗ್ಗೆ ದೂರಿನ ಮೂಲಕ ತಂದ ಹಿನ್ನಲೆಯಲ್ಲಿ ಸುಂಟಿಕೊಪ್ಪ ವಿಎಸ್‌ಎಸ್‌ಎನ್ ನ್ಯಾಯಾಬೆಲೆ ಅಂಗಡಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆ ಸಮಸ್ಯೆಯ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆದು ಮಾತನಾಡಿದ ಅವರು, ಈಗಾಗಲೇ ವಿಎಸ್‌ಎಸ್‌ಎನ್ ವತಿಯಿಂದ ಇಲಾಖೆಯಿಂದ ಸೂಚಿಸಿದ ಮೇರೆಗೆ ಗಣಕಯಂತ್ರವನ್ನು ಬದಲಿಸಲಾಗಿದ್ದು, ಮುಂದಿನ 2 ದಿನಗಳಲ್ಲಿ ಒಎಫ್ ಸಿ ಕೇಬಲ್ ಅಳವಡಿಕೆಯ ನಂತರ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು. ಪಡಿತರದಾರರಿಗೆ ಬಯೋಮೆಟ್ರಿಕ್ ನೀಡಿದ ಕೂಡಲೇ ಪಡಿತರವನ್ನು ವಿತರಿಸುವಂತಾಗಬೇಕು ನ್ಯಾಯಬೆಲೆ ಅಙಗಡಿಗೆ ಮತ್ತೋರ್ವ ಸಿಬ್ಬಂದಿಯನ್ನು ನಿಯೋಜಿನೆಗೊಳಿಸಬೇಕೆಂದು ಪಡಿತರ ಚೀಟಿದಾರರು ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಪಡಿತರ ಚೀಟಿಯಲ್ಲಿ ಹೆಸರುಗಳನ್ನು ನೊಂದಾಯಿತ ಮಂದಿ ಯಾವುದೇ ಇಕೆವೈಸಿ ಮಾಡಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದುಗೊಳ್ಳುವುದಲ್ಲದೆ ಮುಂದಿನ ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತೀರಿ. ನಿಮ್ಮಲ್ಲಿರುವ ಪಡಿತರ ಚೀಟಿಯು ಅಮಾನ್ಯಗೊಂಡು ಮುಂದೆ ನಿಮಗೆ ದೊರೆಯಲು ಕಷ್ಟ ಸಾಧ್ಯವಾಗಬಹುದು. ಪ್ರತಿಯೊಬ್ಬ ಪಡಿತರ ಚೀಟಿಯನ್ನು ಹೊಂದಿರುವ ಮಂದಿ ಯಾವುದೇ ನಿರ್ಲಕ್ಷ್ಯತೆ ತಾಳದೆ ಕೂಡಲೇ ನಿಗಧಿತ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಇಕೆವೈಸಿ ಮಾಡಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡರಲ್ಲದೇ, ಈ ನ್ಯಾಯಬೆಲೆ ಅಂಗಡಿವೊಂರಲ್ಲಿಯೇ 1167ಪಡಿತರ ಚೀಟಿದಾರರಿದ್ದು, 410 ಮಂದಿ ಪಡಿತರು ಇಕೆವೈಸಿ ಮಾಡಿಸಿಕೊಂಡಿದ್ದು, ಉಳಿದವರು ಇದೇ ತಿಂಗಳು 20 ರೊಳಗೆ ಮಾಡಿಸಿಕೊಳ್ಳುವಂತೆ ಸೂಚಿಸಿದರು.
ಸುಂಟಿಕೊಪ್ಪ ವೇವ್ ಸಂಘಟನೆಯ ಸಂಚಾಲಕ ಕೆ.ಎ.ಲತೀಫ್ ಪಡಿತರ ಚೀಟಿದಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಘಟನೆಯ ವತಿಯಿಂದ ಆಹಾರ ಪರಿವೀಕ್ಷಕರಿಗೆ ಮನವಿ ಸಲ್ಲಿಸಿದ ಮೇರೆಗೆ ಭೇಟಿ ನೀಡಿದ್ದ ಅಧಿಕಾರಿ ಸಮಸ್ಯೆಗಳನ್ನು ಖುದ್ಧು ಪರಿಶೀಲಿಸಿ
ಮಾಹಿತಿ ನೀಡಿದರು. ಅಲ್ಲದೆ ಇದೇ ಸಂದರ್ಭದಲ್ಲಿ ತಮ್ಮ ಸಂಘಟನೆಯ ವತಿಯಿಂದ ಇಕೆವೈಸಿ ಮಾಡಿಸಿಕೊಳ್ಳಲು ಬಾಕಿ ಉಳಿದಿರುವ
ಪಡಿತರ ಚೀಟಿದಾರರಿಗೆ ಪ್ರಚಾರ ಕಾರ್ಯ ಮತ್ತು ಮಾಹಿತಿಯನ್ನು ನೀಡುವ ಬಗ್ಗೆ ಅಧಿಕಾರಿಗಳ ಸೂಚಿಸಿರುವ ಮಾಹಿತಿಯ ಸಹಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಇಬ್ರಾಹಿಂ, ಜುಬೇರ್, ರಶೀದ್, ಮಣಿ, ದಿನೇಶ್, ನಿಸಾರ್, ಶರೀಫ್ , ಗ್ರಾ.ಪಂ. ಮಾಜಿ ಸದಸ್ಯರಾದ ಹೆಚ್.ಯು.ರಫೀಕ್ ಖಾನ್, ರಜಾಕ್ ಮತ್ತಿತರರು ಇದ್ದರು.
Back to top button
error: Content is protected !!