ಕುಶಾಲನಗರ, ಅ 21: ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ಆಶ್ರಯದಲ್ಲಿ ಕೊಡಗಿನಲ್ಲಿ ಶುಕ್ರವಾರ ನಡೆದ ಕಾವೇರಿ ನದಿ ಉತ್ಸವ-2022 ರ ಅಂಗವಾಗಿ ಸಂಜೆ ಕುಶಾಲನಗರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.
ಕೊಡಗು ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯ ಡಿ.ಕೆ.ತಿಮ್ಮಪ್ಪ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ತಮಿಳುನಾಡು ಅಖಿಲ ಭಾರತ ಸನ್ಯಾಸಿ ಸಂಘದ ರಮಾನಂದ ಸ್ವಾಮೀಜಿ, ಶ್ರೀರಂಗಪಟ್ಟಣ ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರದ ವೇ.ಬ್ರ.ಭಾನುಪ್ರಕಾಶ್ ಶರ್ಮ, ನೀರಾವರಿ ನಿಗಮದ ಮುಖ್ಯ ಅಭಿಯಂತರ ವೆಂಕಟೇಶ್, ಎಇಇ ಪುಟ್ಟಸ್ವಾಮಿ
ಕೂ
ಡುಮಂಗಳೂರು ಗ್ರಾಪಂ ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ಕಾವೇರಿ ರಿವರ್ ಸೇವಾ ಟ್ರಸ್ಟ್ ನ ಎಂ.ಎನ್.ಚಂದ್ರಮೋಹನ್, ಸ್ವಚ್ಚತಾ ಆಂದೋಲನದ ಜಿಲ್ಲಾ ಸಂಚಾಲಕಿ ರೀನಾ ಪ್ರಕಾಶ್, ಆರತಿ ಬಳಗದ ವನಿತಾ ಚಂದ್ರಮೋಹನ್ ಸೇರಿದಂತೆ ಪಪಂ ಸದಸ್ಯರುಗಳು, ಸ್ವಾಮೀಜಿಗಳು, ಸಂಘಸಂಸ್ಥೆ, ಸಂಘಟನೆಗಳ ಪ್ರಮುಖರು, ನಿಗಮದ ಅಧಿಕಾರಿ ವರ್ಗದವರು, ಉತ್ಸವದ ಸಮಿತಿಗಳ ಪ್ರಮುಖರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ವಿವಿಧ ನೃತ್ಯ ಶಾಲೆಗಳ ವಿದ್ಯಾರ್ಥಿಗಳು ಕಾವೇರಿ ನದಿ ಇತಿಹಾಸ, ಹಿನ್ನಲೆ ಗಾಯನಕ್ಕೆ ನೃತ್ಯ ಮಾಡಿ ರಂಜಿಸಿದರು.
ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅದ್ದೂರಿ ಮೆರವಣಿಗೆ ನಡೆಯಿತು. ಬೈಚನಹಳ್ಳಿ ಮಾರಮ್ಮ ದೇವಾಲಯದಿಂದ ಖಾಸಗಿ ಬಸ್ ನಿಲ್ದಾಣದ ವೇದಿಕೆವರೆಗೆ ಕೇರಳದ ಚಂಡೆ, ನಾದಸ್ವರ, ಕಂಸಾಳೆ, ಡೊಳ್ಳು ಕುಣಿತದೊಂದಿಗೆ ಕಾವೇರಿ ಮಾತೆ ವೇಷಧಾರಿಯನ್ನು ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಸ್ಥಳೀಯ ಭಜನಾ ಮಂಡಳಿಯ ಮಹಿಳೆಯರ ಕೋಲಾಟ ನಡೆಯಿತು. ಗೌಡ, ಕೊಡವ ಸಮುದಾಯವರು ಸಾಂಪ್ರದಾಯಿಕ ಉಡುಗೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿವಿಧ ಶಾಲಾ ವಿದ್ಯಾರ್ಥಿಗಳು ಕಾವೇರಿ ಸಂರಕ್ಷಣೆ ಕುರಿತು ಭಿತ್ತಿ ಫಲಕ ಹಿಡಿದು ಜಾಗೃತಿ ಮೂಡಿಸಿದರು.
ಇದೇ ಸಂದರ್ಭ ತಮಿಳುನಾಡಿನ ಸಾಧುಸಂತರ ತಂಡ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!