ಕುಶಾಲನಗರ, ಸೆ 27: ಸೋಮವಾರ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಹಾಕಿ ಪಂದ್ಯಾಟದಲ್ಲಿ ಸೋಮವಾರಪೇಟೆ ತಾಲ್ಲೂಕು ತಂಡ ವಿರಾಜಪೇಟೆ ತಂಡವನ್ನು 5-1 ಅಂತರದಲ್ಲಿ ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.ಮೊದಲು ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಸೋಮವಾರಪೇಟೆ ತಂಡ ಮಡಿಕೇರಿ ತಂಡವನ್ನು 9-0 ಅಂತದರಲ್ಲಿ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು.
ಸೋಮವಾರಪೇಟೆ ತಂಡವನ್ನು ಅನುಗ್ರಹ ಪದವಿ ಪೂರ್ವ ಕಾಲೇಜು ಕುಶಾಲನಗರದ ವಿದ್ಯಾರ್ಥಿಗಳು ಪ್ರತಿನಿಧಿಸಿದರೆ ವಿರಾಜಪೇಟೆ ತಂಡವನ್ನು ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆ ತಂಡ ಪ್ರತಿನಿಧಿಸಿತ್ತು.
ಗೆದ್ದಂತಹ ಅನುಗ್ರಹ ಪದವಿ ಪೂರ್ವ ಕಾಲೇಜು ತಂಡ ನವೆಂಬರ್ ನಲ್ಲಿ ಉಡುಪಿ ಜಿಲ್ಲೆಯ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಈ ಸಂದರ್ಭ ಅನುಗ್ರಹ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ಪಂಡರಿನಾಥ್ ನಾಯ್ಡು, ಉಪನ್ಯಾಸಕ ನೌಶಾದ್ ಹೆಚ್. ಕೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಅಭಿಷೇಕ್ ಇದ್ದರು.
Back to top button
error: Content is protected !!