ಪೊಲೀಸ್

ಹುಲ್ಲಿನ‌ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ

ಕುಶಾಲನಗರ, ಫೆ 27: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿ ಅರುಣೇಶ್ ಹಾಗೂ ಚಂದ್ರು ಸಹೋದರರು ಸಂಗ್ರಹಿಸಿಟ್ಟದ್ದ ಹುಲ್ಲಿನ ಕಂತೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ತಡರಾತ್ರಿ ನಡೆದ ಘಟನೆಯಲ್ಲಿ 2000 ಹುಲ್ಲಿನ ಕಂತೆಗಳು ಸುಟ್ಟು ಭಸ್ಮವಾಗಿದ್ದು ಬಡ ರೈತ ಸಹೋದರರ ವಾರ್ಷಿಕ‌ ಜೀವನಾಧಾರವಾಗಿದ್ದ 60 ಸಾವಿರ ರೂಗಳ ಮೌಲ್ಯದ ಹುಲ್ಲು ನಷ್ಟ ಉಂಟಾಗಿದೆ.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸರ‌ ಗಮನಕ್ಕೆ ತರಲಾಗಿದೆ ಎಂದು ನಂಜರಾಯಪಟ್ಟಣ ಗ್ರಾಪಂ ಮಾಜಿ ಸದಸ್ಯ ರಕ್ಷಿತ್ ಮಾವಜಿ ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!