ಕುಶಾಲನಗರ, ಆ 23:ಮಾನಸಿಕ ಅಸ್ವಸ್ಥತೆಯಾಗಿದ್ದು ಗಾಯಗೊಂಡಿದ್ದ ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್. ಠಾಣಾಧಿಕಾರಿಯ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಏನಿದು ಘಟನೆ : ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥತೆಯಾದ ವೃದ್ದೆಯೋರ್ವಳು ತಲೆಗೆ ಗಾಯಗೊಂಡು ನರಳುತ್ತಿದ್ದಳು. ಸಿದ್ದಾಪುರ ಬಸ್ ನಿಲ್ದಾಣವು ಪ್ರತಿನಿತ್ಯ ಹಲವಾರು ಮಂದಿ ಮದ್ಯವ್ಯಸನಿಗಳ ಆಶ್ರಯ ತಾಣವಾಗಿ ಮಾರ್ಪಾಡು ಹೊಂದಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಯಾರೂ ಕೂಡ ತಿರುಗು ನೋಡುವುದಿಲ್ಲ. ಕರ್ತವ್ಯದ ನಿಮಿತ್ತ ತೆರಳುತ್ತಿದ್ದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಬಸ್ ನಿಲ್ದಾಣದಲ್ಲಿ ವೃದ್ದೆಯೋರ್ವಳು ಗಾಯಗೊಂಡ ಸ್ಥಿತಿಯಲ್ಲಿ ಮಲಗಿರುವುದನ್ನು ಗಮನಿಸಿ ಆಕೆಯ ಬಳಿ ತೆರಳಿ ವಿಚಾರಿಸಿದ್ದಾರೆ. ಈ ಸಂಧರ್ಭದಲ್ಲಿ ವೃದ್ದೆಯು ತನ್ನ ಹೆಸರನ್ನು ಮಾತ್ರ ಪದೇ ಪದೇ ಹೇಳುತ್ತಿದ್ದು ವಿಳಾಸ ತಿಳಿಸಿರುವುದಿಲ್ಲ. ಮಾನಸಿಕ ಅಸ್ವಸ್ಥಳಾಗಿರುವುದು ಖಚಿತಪಡಿಸಿಕೊಂಡ ಠಾಣಾಧಿಕಾರಿ ಕೂಡಲೇ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೃದ್ದೆಗೆ ಪ್ರಾಥಮಿಕ ಚಿಕಿತ್ಸೆ ಹಾಗೂ ಆಹಾರವನ್ನು ನೀಡಿ ವಿರಾಜಪೇಟೆಯ ವೃದ್ದಾಶ್ರಮಕ್ಕೆ ದಾಖಲಿಸಿದ್ದಾರೆ.
ಮಾನವೀಯತೆ ಮೆರೆದ ಧಕ್ಷ ಅಧಿಕಾರಿ :- ಇತ್ತೀಚಿಗೆ ನಾಪೋಕ್ಲು ಪೊಲೀಸ್ ಠಾಣೆಯಿಂದ ಸಿದ್ದಾಪುರ ಠಾಣೆಗೆ ವರ್ಗಾವಣೆಗೊಂಡಿದ್ದ ಠಾಣಾಧಿಕಾರಿ ಮಂಜುನಾಥ್ ಧಕ್ಷ ಅಧಿಕಾರಿ ಎಂದೇ ಖ್ಯಾತಿ ಹೊಂದಿದ್ದಾರೆ. ಇತ್ತೀಚೆಗೆ ಮಡಿಕೇರಿಯ ಪೊಲೀಸ್ ಅತಿಥಿ ಗೃಹದಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ದರೋಡೆ ಮಾಡಿ ತಲೆಮರೆಸಿಕೊಂಡ ಅಂತರ್ ರಾಜ್ಯ ನಟೋರಿಯಸ್ ಗ್ಯಾಂಗ್ ನ್ನು ಪತ್ತೆಹಚ್ಚಿ ಬಂಧಸಿದ್ದ ಪೊಲೀಸ್ ಅಧಿಕಾರಿಗಳ ನೇತೃತ್ವವು ಕೂಡ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ರವರದ್ದಾಗಿದೆ. ಕರ್ತವ್ಯದ ನಡುವೆಯೂ ಕೂಡ ಸಾಮಾಜಿಕ ಕಳಕಳಿ ಯೊಂದಿಗೆ ನಿರ್ಗತಿಕರ ಸೇವೆಗೆ ಮುಂದಾಗುವ ಮೂಲಕ ಮಾನವೀಯತೆಯನ್ನು ಮೆರೆಯುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
::;
ಯಾವುದೇ ಮಾನವೀಯ ಸೇವೆಯನ್ನು ಪ್ರಚಾರಕ್ಕಾಗಿ ಬಳಸುವ ಉದ್ದೇಶವಿಲ್ಲ.ವೃದ್ದೆ ಗಾಯಗೊಂಡು ನರಳಾಡುತ್ತಿದ್ದರು. ವಿಚಾರಿಸಿದಾಗ ಸೀತಮ್ಮ ಎಂಬ ಹೆಸರನ್ನು ಮಾತ್ರ ತಿಳಿಸಿದ್ದಾರೆ.ಉಳಿದಂತೆ ವಿಳಾಸ ತಿಳಿದಿರಯವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವಿರಾಜಪೇಟೆಯ ವೃದ್ದಾಶ್ರಮಕ್ಕೆ ದಾಖಲಿಸಿದ್ದೆವು. ಆದರೆ ಈ ರೀತಿ ಹೆತ್ತ ತಾಯಿಯನ್ನು ಮಾನಸಿಕ ಅಸ್ವಸ್ಥತೆಯ ಹೆಸರಿನಲ್ಲಿ ಸ್ವತಃ ಮಕ್ಕಳು ಬೀದಿ ಪಾಲು ಮಾಡುವುದು ಸರಿಯಲ್ಲ.ಮನುಷ್ಯ ತ್ವನ್ನು ಮರೆತು ಹೆತ್ತವರನ್ನು ಅನಾಥರನ್ನಾಗಿಸುವುದು ಇತ್ತೀಚೆಗೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡ ನಿರ್ಗತಿಕರ ಕುರಿತು ಕಾಳಜಿ ವಹಿಸುತ್ತಿದ್ದು ಸ್ಥಳೀಯ ಸಂಘ ಸಂಸ್ಥೆಗಳು ಕೂಡ ಕಾರ್ಯಪ್ರವೃತರಾಗಿ ನಿರ್ಗತಿಕರ ಹಾಗೂ ಮಾನಸಿಕ ಅಸ್ವಸ್ಥತರ ನೆರವಿಗೆ ನಿಲ್ಲಬೇಕು ಎಂದು ಮಂಜುನಾಥ್ ತಿಳಿಸಿದ್ದಾರೆ.
Back to top button
error: Content is protected !!