ಪ್ರಕಟಣೆ

ಕುಶಾಲನಗರ-ಹಾರಂಗಿ ರಸ್ತೆ ಕಾಮಗಾರಿಗೆ 10 ಕೋಟಿ ಹಣ ಬಿಡುಗಡೆ: ಶೀಘ್ರದಲ್ಲಿ ಕಾಮಗಾರಿ: ಅಪ್ಪಚ್ಚು ರಂಜನ್

ಕುಶಾಲನಗರ, ಅ 08: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಹಾರಂಗಿ ಅಣೆಕಟ್ಟೆ ವೀಕ್ಷಣೆಗೆ ರಾಜ್ಯ ಮತ್ತು ಅಂತರ್ ರಾಜ್ಯ ಗಳಿಂದ ಸಾವಿರಾರು ಪ್ರವಾಸಿಗರು ದಿನಂಪ್ರತಿ ಜಿಲ್ಲೆಗೆ ಅಗಮಿಸುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಹಾರಂಗಿ ಮುಖ್ಯರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಶಾಸಕ ಅಪ್ಪಚ್ಚುರಂಜನ್ ತಿಳಿಸಿದರು. ರಸ್ತೆ ತೀರಾ ಹಾಳಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಾಯ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್ ನವರ ಮನವಿ ಪತ್ರದ ಮೇರೆಗೆ ಶಾಸಕರ ಪ್ರಯತ್ನದಿಂದಾಗಿ ಈಗಾಗಲೇ 10 ಕೋಟಿ ಹಣ ಬಿಡುಗಡೆಗೊಂದಿದ್ದು, ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದ ತಕ್ಷಣವೇ ಕಾಮಗಾರಿಯನ್ನು ಆರಂಭ ಮಾಡಲಾಗುವುದು ಎಂದು ಎಂ. ಪಿ ಅಪ್ಪಚ್ಚು ರಂಜನ್ ತಿಳಿಸಿದರು.

ಈಗಾಗಲೇ ನೀರಾವರಿ ಇಲಾಖೆಯ ವತಿಯಿಂದ ರಸ್ತೆಯ ಕಾಮಗಾರಿಯ ಕ್ರಿಯಾ ಯೋಜನೆ ಅನುಗುಣವಾಗಿ ಪ್ರಕ್ರಿಯೆ ನಡೆದಿದ್ದು ಸರಕಾರ ಮಟ್ಟದಲ್ಲಿ ಹಣ ಬಿಡುಗಡೆಗೆ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ವತಿಯಿಂದ ಟೆಂಡರ್ ಪ್ರಕ್ರಿಯೆ ನಡೆದು ಅದರ ಮುಖೇನ ಸಾರ್ವಜನಿಕರಿಗೆ ಪ್ರಮುಖವಾಗಿ ಅನುಕೂಲವಾಗುವ ದೃಷ್ಟಿಯಿಂದ ವ್ಯವಸ್ಥಿತವಾಗಿ ರಸ್ತೆಯ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಅಲ್ಲದೆ ನೀರಾವರಿ ಇಲಾಖೆ ಮೂಲಕ ಇನ್ನೂ ಕೂಡಿಗೆ ಮತ್ತು ತೊರೆನೂರು ಗ್ರಾಮ ವ್ಯಾಪ್ತಿಯ ವಿವಿಧ ರಸ್ತೆಗಳ ಕಾಮಗಾರಿಗಳನ್ನು ಕೈಗೊಳ್ಳುವ ಟೆಂಡರ್ ಪ್ರಕ್ರಿಯೆ ನೆಡೆಯುತ್ತಿದೆ . ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಬಾಕಿ ಇರುವ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಾಸ್ಕರ್ ನಾಯಕ್, ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜರ್ಯವರ್ಧನ್ ಕುಶಾಲನಗರ ಕುಡ ಅಧ್ಯಕ್ಷ ಎಂ ಎಂ ಚರಣ್ ನಿರ್ದೇಶಕರಾದ ವೈಶಾಕ್, ಪುಂಡರೀಕಾಕ್ಷ, ನಗರ ಬಿ ಜೆ ಪಿ ಅಧ್ಯಕ್ಷ ಉಮಾಶಂಕರ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!