ಟ್ರೆಂಡಿಂಗ್

ಕುಶಾಲನಗರ ಎಪಿಸಿಎಂಎಸ್ ಮೂಲಕ 3 ಸಾವಿರ ಪುಸ್ತಕ ವಿತರಣೆ

ಕುಶಾಲನಗರ ಎಪಿಸಿಎಂಎಸ್ ಮೂಲಕ 3 ಸಾವಿರ ಪುಸ್ತಕ ವಿತರಣೆ

ಕುಶಾಲನಗರ, ಅ 01: ಕುಶಾಲನಗರದ ಎಪಿಸಿಎಂಎಸ್ ಮೂಲಕ ಸಂಘದ‌ ವ್ಯಾಪ್ತಿಯ ಮೂರು ಬ್ಲಾಕ್ ಗಳಿಗೆ ತಲಾ 1 ಸಾವಿರ ನೋಟ್ ಪುಸ್ತಕ ವಿತರಣೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು‌ ಸಂಘದ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ ತಿಳಿಸಿದರು.

ಹೆಬ್ಬಾಲೆ, ಹುಲುಸೆ ಮತ್ತು ಹಳಗೋಟೆ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ‌ವಿತರಣೆ‌ ಮಾಡಿ‌ ಅವರು‌ ಮಾತನಾಡಿದರು.

ಸಂಘದ ವ್ಯಾಪ್ತಿಯ ಕುಶಾಲನಗರ, ಹೆಬ್ಬಾಲೆ‌ ಮತ್ತು ಸುಂಟಿಕೊಪ್ಪ ಬ್ಲಾಕ್ ಗಳಲ್ಲಿ ತಲಾ ಒಂದು‌ ಸಾವಿರದಂತೆ ಒಟ್ಟು 3 ಸಾವಿರ ಪುಸ್ತಕ ವಿತರಣೆಗೆ ಆಡಳಿತ ಮಂಡಳಿ ಕ್ರಮವಹಿಸಿದೆ‌. ಅದರಂತೆ ಆಯ್ದ ಸರಕಾರಿ ಶಾಲೆಗಳಿಗೆ ವಿತರಣೆ ಕಾರ್ಯ
ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು‌ ಮಾಹಿತಿ‌ ನೀಡಿದರು.

ಸಂಘದ ನಿರ್ದೇಶಕ ಹೆಚ್.ಜೆ.ಶರತ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳಿಗೆ ಸೌಲಭ್ಯಗಳ ಕೊರತೆಯಾಗದಂತೆ ಸಂಘಸಂಸ್ಥೆಗಳು‌ ನಿರಂತರವಾಗಿ ತಮ್ಮ ಕೊಡುಗೆ ನೀಡುತ್ತಿವೆ. ಅಂತೆಯೇ ನಮ್ಮ ಸಂಘ‌ ಕೂಡ ಪುಸ್ತಕ ವಿತರಣೆಗೆ ಚಿಂತನೆ ಹರಿಸಿದೆ ಎಂದರು.

ಹೆಬ್ಬಾಲೆ ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ.ವೆಂಕಟೇಶ್, ಹಳಗೋಟೆ ಶಾಲಾ ಮುಖ್ಯ ಶಿಕ್ಷಕ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಹೆಚ್.ಟಿ. ಚಂದ್ರಕಲಾ,‌ ನಿರ್ದೇಶಕ ಮಹದೇವ್, ಮಾಜಿ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ, ಹಳಗೋಟೆ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ರಂಜಿತಾ, ಹುಲುಸೆ ಶಾಲೆ ಸಹ ಶಿಕ್ಷಕ ದೇವರಾಜ್ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!