ಕುಶಾಲನಗರ, ಆ 26: ಗೊಂದಿಬಸವನಹಳ್ಳಿ
ನಂ 38184ನೇ ಹಾಲು ಉತ್ಪಾದಕಾರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಧುಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಟ್ಟಡದ ಆವರಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಮಧುಕುಮಾರ್,
ಸಂಘವು 2025-26ನೇ ಸಾಲಿನಲ್ಲಿ 3,45,928 ರೂ ನಿವ್ವಳ ಲಾಭ ಗಳಿಸಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಸದಸ್ಯರಿಗೆ ತಿಳಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸೋಮಣ್ಣ, ನಿರ್ದೇಶಕರಾದ ಪ್ರಸನ್ನ ಎಂ.ಎಸ್. ಪ್ರದೀಪ್ ಡಿ.ಜಿ,
ನವೀನ ಜಿ.ಎಲ್, ಶಿವಕುಮಾರ್ ಬಿ. ಎಸ್. ರಾಮೇಗೌಡ, ಲಕ್ಷ್ಮಣ ನಾಯಕ, ತಿಮ್ಮಪ್ಪ,
ದಿವಾಕರ, ಉಷಾ ಡಿ, ಕಾಮಾಕ್ಷಿ, ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಬಿ.ವಿ, ಸಂಘದ
ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ
ಶ್ರೀನಿವಾಸ ಬಿ ಎಸ್,
ಹಾಲು ಪರೀಕ್ಷಕಿ ಸುಜಾತ ಇದ್ದರು.
Back to top button
error: Content is protected !!