ಶಿಕ್ಷಣ

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟು ಪುಸ್ತಕ ವಿತರಣೆ

ಕೂಡಿಗೆ, ಆ‌. 3: ಕುಶಾಲನಗರ ತಾಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕುಶಾಲನಗರ ಇವರ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟು ಪುಸ್ತಕ ವಿತರಣಾ ಕಾರ್ಯಕ್ರಮ ನೆರವೇರಿತು.
ಈ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ ಬಿ.ಆರ್ ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಎಸ್. ಕೆ. ಸತೀಶ್, ಶೋಭಾ ಸತೀಶ್, ಉದ್ಯಮಿಗಳಾದ ರಾಮದಾಸ್, ಭಜನಾ ಮಂಡಳಿ ಸದಸ್ಯರಾದ ಪದ್ಮಾ ಪುರುಷೋತ್ತಮ, ರಮಾ ವಿಜೇಂದ್ರ ಉಪಸ್ಥಿತರಿದ್ದರು.
ಪುಸ್ತಕ ವಿತರಿಸಿ ಮಾತನಾಡಿದ ಉದ್ಯಮಿ ಎಸ್.ಕೆ. ಸತೀಶ್ ಅವರು ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಬೇಕು, ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು, ಗುರಿಯನ್ನು ಸಾಧಿಸುವ ಛಲವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಶಿಕ್ಷಕ ಶ್ರೀ ಹರ್ಷ ಜಿ. ಪ್ರಾಸ್ತಾವಿಕವಾಗಿ ಮಾತಾನಾಡಿದರು. ಹರ್ಷ ಸ್ವಾಗತಿಸಿ, ಟಿ.ಬಿ. ಮಂಜುನಾಥ್ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!