ಸಭೆ
ಮದಲಾಪುರ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆ

ಕುಶಾಲನಗರ, ಆ.26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್. ಆರ್. ಸುನಿಲ್ ರಾವ್ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಹಾಸನ ಹಾಲು
ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಮಹಾಸಭೆ ಉದ್ಘಾಟಿಸಿದರು.
ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ದಿವಂಗತ ಚೆನ್ನಮ್ಮ ಅವರಿಗೆ ಸಂತಾಪ ಸೂಚಿಸಲಾಯಿತು. ವಾರ್ಷಿಕ ಮಹಾಸಭೆ ಆಹ್ವಾನ ಪತ್ರಿಕೆ ಹಾಗೂ ಹಿಂದಿನ ಸಾಲಿನ ವಾರ್ಷಿಕ ಮಹಾಸಭೆ ವರದಿ ಓದಿ ಅಂಗೀಕರಿಸಲಾಯಿತು.
ವಿಸ್ತರಣಾಧಿಕಾರಿ ಬಿ.ವಿ.ವೀಣಾ ಅವರು ಸಂಘದ 2025-26ನೇ ಸಾಲಿನ
ಅಡಿಟ್ ವರದಿ ವಾಚಿಸಿದರು. ಸಂಘದಲ್ಲಿ ಹಾಲಿನ ಶೇಖರಣಾ ಪ್ರಮಾಣ ಕ್ಷೀಣಿಸುತ್ತಿದೆ. ಹಾಲಿನ ಗುಣಮಟ್ಟ ಕೂಡ ಮತ್ತಷ್ಟು ವೃದ್ದಿಸಬೇಕಿದೆ. ಸಂಘದ ಅಭಿವೃದ್ದಿಗೆ ಸದಸ್ಯರು ಹೆಚ್ಚಿನ ಸಹಕಾರ ಅಗತ್ಯವಿದೆ ಎಂದು ಹೈನುಗಾರರಿಗೆ ಸಲಹೆ ನೀಡಿದರು.
25-26ನೇ ಸಾಲಿಗೆ ಅಂದಾಜು ಬಜೆಟ್ ಮಂಜೂರು ಮಾಡಿ, 26-27ನೇ ಸಾಲಿಗೆ ಲೆಕ್ಕಪರಿಶೋಧಕರ ಆಯ್ಕೆ ಮಾಡಲಾಯಿತು.




