ಕೂಡಿಗೆ, ಆ. 19: ರೈತರಿಗೆ ನೆರವಾಗುವ ಮೂಲಕ ವಿವಿಧ ವಿವಿಧ ಸಾಲ ಸೌಲಭ್ಯಗಳನ್ನು ಸಹಕಾರ ಸಂಘದ ಮೂಲಕ ನೀಡುತ್ತಿರುವ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26. ನೇ ಸಾಲಿನಲ್ಲಿ ವಾರ್ಷಿಕವಾಗಿ ವಿವಿಧ ವ್ಯವಹಾರಗಳನ್ನು ಸಂಘದ ಮುಖೇನ ನಡೆಸಿ ಈ ಸಾಲಿನಲ್ಲಿ 90.22. ಲಕ್ಷ ದಷ್ಟು ಲಾಭಾಂಶವನ್ನು ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾಹಿತಿ ನೀಡಿರುತ್ತಾರೆ.
2025-26. ನೇ ಸಾಲಿನಲ್ಲಿ ಸಂಘದ ಸದಸ್ಯರ ಪಾಲು ಬಂಡವಾಳ 4.ಕೋಟಿ 70.ಲಕ್ಷ ದ 44. ಸಾವಿರ ರೂ ಇದ್ದು ಠೇವಣಿ ಹಣವಾಗಿ 27.ಕೋಟಿ, 58.ಲಕ್ಷ , ಇದ್ದು, ರೈತರಿಗೆ ಕೃಷಿ ಸಾಲವಾಗಿ 7.ಕೋಟಿ,65,ಲಕ್ಷದ 19 ಸಾವಿರ ವಿತರಣೆ ಮಾಡಲಾಗುವ ಮೂಲಕ, ಕೃಷಿ ಜಾಮೀನು ಸಾಲವಾಗಿ 9. ಕೋಟಿ 5 ಲಕ್ಷ, ಸ್ವಸಹಾಯ ಗುಂಪುಗಳಿಗೆ 28.88., ಆಭರಣದ ಮೇಲೆ 2.ಕೋಟಿ 23.ಲಕ್ಷ, ಸೇರಿದಂತೆ ವ್ಯಾಪಾರ, ಗೊಬ್ಬರ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರು ,ಸಾರ್ವಜನಿಕರು ಗ್ರಾಮಸ್ಥರು ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಈ ಬಾರಿ ಸಂಘವು ವಾರ್ಷಿಕ ಲಾಭಾಂಶವಾಗಿ 90. ಲಕ್ಷ 22. ಸಾವಿರ ಲಾಭಾಂಶವನ್ನು ಗಳಿಸಿದೆ ಎಂದು ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ.ಕೆ ಹೇಮಂತ್ ಕುಮಾರ್ ತಿಳಿಸಿದರು.
ಸಂಘದ 2025-26 ನೇ ವಾರ್ಷಿಕ ಮಹಾಸಭೆಯು ಸಪ್ಟೆಂಬರ್18. ರಂದು ಸಂಘದ ರೈತ ಸಹಕಾರ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಹರ್ಷ ತಿಳಿಸಿದ್ದಾರೆ.
Back to top button
error: Content is protected !!