ಕುಶಾಲನಗರ, ಆ 17: ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಯಿತು.
ಗ್ರಾಮದ ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗ್ರಾಪಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಿದೆ, ನಾಯಿಗಳ ಹಾವಳಿ ನಿಯಂತ್ರಸಬೇಕಿದೆ ಎಂದು ಆಗ್ರಹಿಸಿ ಘೋಷಣೆ ಕೂಗಲಾಯಿತು.
ಕೂಡಿಗೆ ಕೊಪ್ಪಲು ಗ್ರಾಮದ ರಂಗಣ್ಣ ಅವರ ಮೇಲೆ ದಾಳಿ ನಡೆಸಿದ ನಾಯಿಗಳ ಮಾರಣಾಂತಿಕವಾಗಿ ಘಾಸಿಗೊಳಿಸಿದೆ. ಜಾನುವಾರಿಗಳ ಮೇಲೂ ಬೀದಿ ನಾಯಿಗಳ ದಾಳಿನಡೆಸುತ್ತಿವೆ. ಪ್ರತಿಭಟನೆ ಬಗ್ಗೆ ಸೂಚನೆಯಿದ್ದರೂ ಕೂಡ ಪಿಡಿಒ ರಜೆ ಪಡೆದಿರುವುದು ಸಮಂಸವಲ್ಲ ಎಂದ ಪ್ರತಿಭಟನಾಕಾರರು, ಮನವಿ ಸ್ವೀಕರಿಸಿಲು ಮುಂದಾಗದಿರುವ ಅಧಿಕಾರಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಹಲವು ಬಾರಿ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದರೂ ಕೂಡ ಸೂಕ್ತ ಕ್ರಮಕೈಗೊಂಡಿಲ್ಲ. ನಾಯಿ ದಾಳಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ದೂರು ನೀಡಬೇಕಾಗುತ್ತದೆ. ಗಾಯಾಳು ಚಿಕಿತ್ಸೆಗೆ ಪಂಚಾಯ್ತಿಯಿಂದ ಕ್ರಮವಹಿಸಬೇಕಿದೆ ಎಂದು ಟಿ.ಎ.ನಾರಾಯಣ ಗೌಡರ ಕರವೇ ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಆಗ್ರಹಿಸಿದರು.
ಈ ಸಂದರ್ಭ ಕರವೇ ತಾಲೂಕು
ಉಪಾಧ್ಯಕ್ಷ ಫಯಾಜುದ್ದಿನ್, ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ಆರ್.ದೇವಾಂಗ, ಗೀತಾ, ಕಲ್ಪನಾ, ಖಜಾಂಚಿ ರೊನಾಲ್ಡ್, ಹೆಚ್.ಶಿವರಾಮೇಗೌಡರ ಕರವೇ ತಾಲೂಕು ಅಧ್ಯಕ್ಷ ನಾಗರಾಜು, ಗೌರವಾಧ್ಯಕ್ಷೆ ಪುಟ್ಟಮ್ಮ, ಕಮಾಲುದ್ದಿನ್, ಗ್ರಾಮಸ್ಥರಾದ ಕೆ.ಆರ್.ಗಣೇಶ್, ಮೋಹನ್ ಹಕ್ಕೆ, ಅರುಣ್ ರಾವ್, ಬಿ.ಡಿ.ಅಣ್ಣಯ್ಯ, ಅನಂತ್, ಶಿವಕುಮಾರ್, ಸೋಮಣ್ಣ, ಚಂದ್ರು, ಸುಬ್ಬಯ್ಯ, ನಾಗರಾಜು, ರಜಾಕ್, ಇಸ್ಮಾಯಿಲ್, ರಂಗ, ಧರ್ಮ ಮತ್ತಿತರರು ಇದ್ದರು.
Back to top button
error: Content is protected !!