ಕಾರ್ಯಕ್ರಮ
ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಮಹಿಳಾ ಹಕ್ಕುಗಳ ಜಾಗೃತಿ ಕಾರ್ಯಕ್ರಮ

ಕುಶಾಲನಗರ, ಸೆ 30: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಮಹಿಳಾ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು 29 ಸೆಪ್ಟೆಂಬರ್ 2026ರಂದು ಹೋಟೆಲ್ ಟಾಪ್ ಇನ್ ಟೌನ್, ಕುಶಾಲನಗರದಲ್ಲಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಪ್ರೇಂ ಕುಮಾರ್ ಹಾಗೂ ಅವರ ಧರ್ಮಪತ್ನಿ ಶೈಲಾ ಪ್ರೇಂ ಕುಮಾರ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪವನ್ ಕುಮಾರ್ ಕೆ.ಎನ್., ಕಾರ್ಯದರ್ಶಿ ಲಯನ್ ಕಿರಣ್ ಗೌಡ, ಖಜಾಂಚಿ ಡಾ. ರಾಘವೇಂದ್ರ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಲಯನ್ ಸತೀಶ್, ಲಯನ್ ದಯಾನಂದ್, ಲಯನ್ ಕೊಡಗನ ಹರ್ಷ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.



