ಸಭೆ

ಕೊಡಗು ಶ್ರೀ‌ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ‌ ಮಹಾಸಭೆ

ಮಹಾಸಭೆ ಉದ್ಘಾಟನೆ ಸಂದರ್ಭ

ಕುಶಾಲನಗರ, ಆ 16: ಕೊಡಗು‌ ಶ್ರೀ‌ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ‌ ಮಹಾಸಭೆ ಎಪಿಸಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಟಿ.ಎಸ್. ಶಾಂಭಶಿವಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಸಭೆಯನ್ನು ಸಂಘದ ಗೌರವಾಧ್ಯಕ್ಷರಾದ ಕಿರಿಕೊಡ್ಲಿ‌‌ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ಸದಸ್ಯ ವೃಂದದವರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು

30 ತಿಂಗಳ ಹಿಂದೆ ಪ್ರಾರಂಭವಾಗಿ ಮಾರ್ಚ್ 2026 ಅಂತ್ಯಕ್ಕೆ 1364 ಸದಸ್ಯರನ್ನು ಹೊಂದಿರುವ ಸಂಘ ರೂ 18.38 ಕೋಟಿ ವಹಿವಾಟನ್ನು ನಡೆಸಿದೆ. ಸಂಘದ ಮೂಲಕ ಸಾಲ ಪಡೆದ ಹಣವನ್ನು ಸಂಬಂಧಿಸಿದ ಸದಸ್ಯರು ಶೇ 100% ರಷ್ಟು ಮರುಪಾವತಿ ಮಾಡಿದ್ದಾರೆ. ಈ ಮೂಲಕ ರೂ 2.50 ಲಕ್ಷ ವಾರ್ಷಿಕ ಆದಾಯ ಬಂದಿದೆ ಎಂದು ತಿಳಿಸಿದರು. ಕಳೆದ 3 ವರ್ಷಗಳ ಹಿಂದೆ ಸಂಘ ಸ್ಥಾಪನೆಗೆ ಮುಂದಾದ ಸಂದರ್ಭ ಷೇರುದಾರರ ಸಕಾರಾತ್ಮಕ ಸ್ಪಂದನೆ‌ ಕಾರಣ ಸಂಘ ಇಂದು ಅಭಿವೃದ್ಧಿ ಹಾದಿಯಲ್ಲಿದೆ. ಸಾಲ ಪಡೆದ ಸದಸ್ಯರು ಕೂಡ ಸಕಾಲಕ್ಕೆ‌ ಸಾಲ ಮರುಪಾವತಿಸಿ ಸಹಕಾರ ನೀಡುತ್ತಿದ್ದಾರೆ. ಎಲ್ಲರೂ ಕೂಡ ಸಂಘದಲ್ಲಿ ವಹಿವಾಟು ನಡೆಸಿದಲ್ಲಿ ಸಂಘ ಮತ್ತಷ್ಟು ಆರ್ಥಿಕವಾಗಿ ಸದೃಢವಾಗಲಿದೆ ಎಂದು ಕೋರಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಪಿ.ಉದಯಕುಮಾರ್
ನಿರ್ದೇಶಕರಾದ ಹೆಚ್. ವಿ. ಶಿವಪ್ಪ, ಪುಟ್ಟರಾಜು ಹೆಚ್. ಎಸ್, ಸುರೇಶ್ ಎಸ್.ಎಸ್, ಮೋಕ್ಷಿಕ್ ರಾಜ್ ಹೊನ್ನಗುಡಿ, ಪ್ರಶಾಂತ್ ಕೆ.ಡಿ, ಮಮತಾ ಎ.ಆರ್, ಯಶೋದ ಜಿ.ಎಸ್, ಬಸವರಾಜು, ಶುಭಶೇಖರ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಬಸವಣ್ಣಯ್ಯ, ಲೆಕ್ಕಪರಿಶೋಧಕ ಚಂದ್ರಶೇಖರ್ ಇದ್ದರು.not

Related Articles

Leave a Reply

Your email address will not be published. Required fields are marked *

Back to top button
error: Content is protected !!