ಕಾರ್ಯಕ್ರಮ

ರಸೂಲ್ ಬಡಾವಣೆ ನಿವಾಸಿಗಳ ಸಂಘದ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಕುಶಾಲನಗರ, ಆ 15: ಪಟ್ಟಣದ ರಸೂಲ್ ಬಡಾವಣೆ ನಿವಾಸಿಗಳ ಸಂಘದ ಆಶ್ರಯದಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಪುರಸಭೆಯ ಪೌರಕಾರ್ಮಿಕರು ಧ್ವಜಾರೋಹಣ ನೆರವೇರಿಸಿದರು.

ಪೌರ ಕಾರ್ಮಿಕರಿಂದ ಧ್ವಜಾರೋಹಣ

ಮುಖ್ಯ ಅತಿಥಿಯಾಗಿ ಆಗಮಿಸಿದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ನಾಯಕರು ಮಾಡಿದ ತ್ಯಾಗವನ್ನು ನಾವು ಸ್ಮರಿಸಬೇಕಾಗಿದೆ ಎಂದರು. ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ, ನಗರದೊಳಗಿನ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಶ್ರಮ ಅಪಾರ ಎಂದರು.
ನಗರದ ಸ್ವಚ್ಛತೆ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುವ ಪೌರ ಕಾರ್ಮಿಕರೇ ನಗರದ ಮುಖ್ಯ ಶಕ್ತಿಯಾಗಿದ್ದು ಅಂತವರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪೌರ ಕಾರ್ಮಿಕರು ಕಾರ್ಯದ ಒತ್ತಡಗಳಿಂದ ತಮ್ಮ ಆರೋಗ್ಯವನ್ನು ಕಡೆಗಣಿಸಬಾರದು ಎಂದು ಚಂದ್ರಮೋಹನ್ ಕಿವಿಮಾತು ಹೇಳಿದರು.
ಇದೇ ಸಂದರ್ಭ ಪೌರಕಾರ್ಮಿಕರಾದ ವೆಂಕಟೇಶ್, ಬಸವರಾಜು ಮತ್ತು ರಾಜೇಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ
ಅತ್ಯುನ್ನತ ಸಾಧನೆ ಮಾಡಿದ ಬಡಾವಣೆಯ ವಿದ್ಯಾರ್ಥಿನಿ ಅದಾ ರಿಜಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.‌
ಈ ಸಂದರ್ಭ ಅಪೋಲೋ ಟೈಯರ್ಸ್ ನ ಮಾಲೀಕರಾದ ಅಮ್ಜದ್ ಹುಸೇನ್, ನಿಧಾ ಹುಸೇನ್, ಪುರಸಭೆ ಮಾಜಿ ಸದಸ್ಯ ಶೇಖ್ ಕಲೀಮುಲ್ಲಾ, ಕೆಇಬಿ ಲೈನ್‌ಮ್ಯಾನ್ ವಸೀಮ್,
ವಾಟರ್‌ಮ್ಯಾನ್ ಭರತ್, ಸೇರಿದಂತೆ ಮತ್ತಿತರರು
ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!