ಕಾಮಗಾರಿ

ಮಾದಾಪಟ್ಟಣ, ಹೊಸಕಾಡು ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಕುಶಾಲನಗರ, ಸೆ 29: ಕುಶಾಲನಗರದ ಮಾದಾಪಟ್ಟಣ ಮತ್ತು‌ ಬಸವನಹಳ್ಳಿಯ ಹೊಸ ಕಾಡು‌ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

ಮಾದಾಪಟ್ಟಣದಲ್ಲಿ
ರೂ 25 ಲಕ್ಷ ವೆಚ್ಚದಲ್ಲಿ 375 ಮೀ ಉದ್ದದ್ದ ಕಾಂಕ್ರಿಟ್ ರಸ್ತೆ ಮತ್ತು ರೂ 50 ಲಕ್ಷ ವೆಚ್ಚದ ಹೊಸಕಾಡಿಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಕುಶಾಲನಗರ ತಾಲೂಕು‌ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಜಿಪಂ ಮಾಜಿ‌ ಸದಸ್ಯೆ ಕೆ.ಪಿ.ಚಂದ್ರಕಲಾ, ಆಯಾ ಗ್ರಾಮ ವ್ಯಾಪ್ತಿಯ ಮುಖಂಡರಾದ ದಾಮೋದರ್, ನಂಗಾರು ಜಗ, ಚಂದ್ರಶೇಖರ್, ಮಹೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!