ಕಾರ್ಯಕ್ರಮ

ಕುಶಾಲನಗರ ಕೊಡವ ಸಮಾಜದಲ್ಲಿ ಕಕ್ಕಡ 18 ಆಚರಣೆ

ಕುಶಾಲನಗರ, ಆ 03:ಕುಶಾಲನಗರ ಕೊಡವ ಸಮಾಜದಲ್ಲಿ ಇಂದು ಕಕ್ಕಡ 18 ರ ಹಬ್ಬದ ಸಮಾರಂಭವು ಸಮಾಜದ ಅಧ್ಯಕ್ಷರಾದ ಶ್ರೀ ವಾಂಚೀರ ಮನು ನಂಜುಂಡರವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಪೇರಿಯಂಡ ರೀಟಾರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ಸಮಾಜದ ಅಧ್ಯಕ್ಷರಾದ ಶ್ರೀ ವಾಂಚೀರ ಮನು ನಂಜುಂಡರವರು ಮಾತಾಡಿ ನಾಡಿನ ಸಮಸ್ತ ಬಾಂಧವರಿಗೆ ಹಬ್ಬದ ಹಾರ್ದಿಕ ಶುಭಾಶಯವನ್ನು ಕೋರುತ್ತಾ ಕಕ್ಕಡ 18 ರ ಮಹತ್ವವನ್ನು ತಿಳಿಸಿದರು . ಹಾಗೆಯೇ ಹಬ್ಬದ ಸಂಬಂಧ ಮಳಿಗೆಗಳನ್ನು ಇಟ್ಟವರಿಗೆ ಶುಭವಾಗಲಿ ಎಂದು ಹಾರೈಸಿದರು . ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿಯಾದ ಶ್ರೀ ಅಯಿಲಪಂಡ ಸಂಜು ಬೆಳ್ಳಿಯಪ್ಪ ಖಚಾಂಚಿಯಾದ ಶ್ರೀಮತಿ ಚೊವಂಡ ಅನಿತ ಅಯ್ಯಪ್ಪ ಪೊಮ್ಮಕ್ಕಡ ಕೂಟದ ನೀರ್ದೇಶಕಿಯರಾದ ಶ್ರೀಮತಿ ಉದಿಯಂಡ ನೇಹ ಜಗದೀಶ ಶ್ರೀಮತಿ ಐಮುಡಿಯಂಡ ಶೈಲಾ ಶ್ರೀಮತಿ ಪಾಸುರ ಇಂದಿರ ಮುತ್ತಣ ಶ್ರೀಮತಿ ಕಾವಡಿಚಂಡ ಮಲ್ಲಿಗೆ ಪೊನ್ನಮ್ಮ ನಂದಿನೆರವಂಡ ನಳಿನಿ ಜಗದೀಶ ಶ್ರೀಮತಿ ಬೊಪ್ಪಂಡ ಕನಿಕೆ ಉಪಸ್ತಿತಿ ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!