ಕುಶಾಲನಗರ, ಸೆ 05: ಹೆಸರಾಂತ ಬಣ್ಣ ತಯಾರಿಕ ಕಂಪೆನಿಯೊಂದರ ರಾಯಭಾರಿಯಾಗಿರುವ ಹಿಂದಿ ಭಾಷಾ ನಟ ರಣಭಿರ್ ಕಪೂರ್ ಅವರು ಇತ್ತೀಚಿಗೆ ಹೇಳಿದ ” ನಾನು ಗೋ ಮಾಂಸವನ್ನು ಪ್ರೀತಿಸುತ್ತೇನೆ ಹಾಗು ತಿನ್ನುತ್ತೇನೆ ” ಎಂಬ ಹೇಳಿಕೆಯನ್ನು ಖಂಡಿಸಿ ಕುಶಾಲನಗರದ ಬಣ್ಣದಂಗಡಿಯ ಉದ್ಯಮಿಯೊಬ್ಬರು ಅವರ ಅಂಗಡಿ ಎದುರು ನಿಲ್ಲಿಸಿದ್ದ ಕಟೌಟ್ ಗೆ ಮಸಿ ಬಳಿದು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬನಿಗೂ ಆಹಾರದ ವಿಷಯದಲ್ಲಿ ವಯುಕ್ತಿಕ ಸ್ವಾಂತಂತ್ರ್ಯವಿದ್ದರೂ ಕೂಡ ರಣಬೀರ್ ಕಪೂರ್ ಓರ್ವ ಹಿಂದೂ ಆಗಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವುದು ದುರದೃಷ್ಟಕರ ಎಂದು ಉದ್ಯಮಿ ಬಿ.ಎನ್.ಶ್ರೀಧರ್ ಹೇಳಿದರು.
ತನ್ನ ತಪ್ಪನ್ನು ಮನಗಂಡು ಅವರು ಈ ಕೂಡಲೇ ಬಹುಸಂಖ್ಯಾತರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಇದ್ದರು.
Back to top button
error: Content is protected !!