ಕುಶಾಲನಗರ, ಸೆ 05: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಶಾಲನಗರದ ವಿಮಾ ಕಛೇರಿ ಬಳಿ ಕಪ್ಪು ಪಟ್ಟಿ ಧರಿಸಿ ಸೋಮವಾರ ಪ್ರತಿಭಟಿಸಲಾಯಿತು.
ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಮೋಹನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜೀವ ವಿಮಾ ಪ್ರತಿನಿಧಿಗಳನ್ನು ವೃತ್ತಿಪರರು ಎಂದು ಗುರುತಿಸಬೇಕು,
ಪಾಲಿಸಿದಾರರ ಸಾಲ ಮತ್ತು ಪ್ರೀಮಿಯಂ ವಿಳಂಭದ ಶುಲ್ಕದ ಬಡ್ಡಿ ಕಡಿಮೆ ಮಾಡಬೇಕು,
ಜಿಎಸ್ ಟಿ ತೆಗೆದು ಹಾಕಬೇಕು,
ಪ್ರತಿನಿಧಿಗಳ ಕಲ್ಯಾಣ ನಿಧಿ ಆರಂಭಿಸಬೇಕು, ಪಿಂಚಣಿ ಯೋಜನೆ ಜಾರಿಮಾಡಬೇಕು,
ಪ್ರತಿನಿಧಿಗಳಿಗೆ ಗ್ರೂಪ್ ಮೆಡಿಕ್ಲೈಮ್ ನೀಡಬೇಕು, ಅವಧಿ ವಿಮೆ ಮತ್ತು ವಹಿವಾಟು ಶುಲ್ಕ ಹೆಚ್ವಿಸಬೇಕು, ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಜೀವ ವಿಮಾ ನಿಗಮದ ಹಿರಿಯ ಪದಾಧಿಕಾರಿಗಳಾದ ಸುಬ್ರಮಣಿ, ಟಿ.ಬಿ.ಜಗದೀಶ್, ಒಕ್ಕೂಟದ ಪದಾಧಿಕಾರಿಗಳಾದ ಹೆಚ್.ಎನ್. ದಿನೇಶ್, ಖಜಾಂಚಿ ಹೇಮಾವತಿ, ನಂದಕುಮಾರ್, ತಾರಕೇಶ್ವರಿ, ಮಹದೇವ, ಜ್ಯೋತಿ, ಪುರುಷೋತ್ತಮ, ರಿನಿತ್ ಶರೋನ್ಹಾ, ನಾಗರಾಜು, ಎ.ಎನ್.ರಮೇಶ, ಡಿ.ಸಿ.ಶಿವಣ್ಣ, ಸಿ.ಆರ್.ನಾಗರಾಜು, ಹೆಚ್.ಎಸ್.ಲೋಕೇಶ್ ಮೊದಲಾದವರಿದ್ದರು.
Back to top button
error: Content is protected !!