ಮನವಿ

ಎಚ್1 ಎನ್ 1 ಗೆ ಗರ್ಭಿಣಿ ಬಲಿ: ಆರೋಗ್ಯ ತಪಾಸಣೆಗೆ‌ ಮುಂದಾಗಲು ಸೂಚನೆ

ಕುಶಾಲನಗರ, ಸೆ.02: ಎಚ್1 ಎನ್1 ಗೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಗರ್ಬಿ ಣಿಯೊಬ್ಬರು ಬಲಿಯಾಗಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿ ನಾಯ್ಕರ ಪುತ್ರಿ. ಛಾಯಾ(28) ಸಾವನ್ನಪ್ಪಿದವರು. ಪತಿ. ಒಬ್ಬ ಮಗನಿದ್ದಾನೆ.
ಕೆ.ಆರ್.ನಗರ ತಾಲೂಕಿನ‌ ಚುಂಚನಕಟ್ಟೆ ಹೊಸೂರಿಗೆ ವಿವಾಹವಾಗಿದ್ದರು. ಹಬ್ಬದ ಹಿನ್ನೆಲೆಯಲ್ಲಿ ತವರು ಮನೆಗೆ ಬಂದಿದ್ದ ಇವರಿಗೆ ಜ್ವರ ಕಾಣಿಸಿಕೊಂಡು ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರದೊಂದಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೊನಾ. ಚಿಕನ್ ಗುನ್ಯಾ.ಎಚ್.1 ಎನ್1 ಪರೀಕ್ಷೆಗೊಳಪಟ್ಟಿದ್ದರು.
ಎಚ್.1 ಎನ್1 ಕಾಯಿಲೆ ದೃಡ ಪಟ್ಟಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ.
ಆರೋಗ್ಯಾಧಿಕಾರಿ ಸ್ಪಷ್ಟನೆ:
ಹನಗೋಡು ಹೋಬಳಿಯ ಗೃಹಿಣಿಯಲ್ಲಿ ಎಚ್.1 ಎನ್ 1 ದೃಡಪಟ್ಟಿತ್ತು. ಹನಗೋಡು ಆಸ್ಪತ್ರೆ ನಂತರದಲ್ಲಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು. ಇವರ ಕುಟುಂಬ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಪರೀಕ್ಷೆಗೊಳಪಡಿಸಲು ಹನಗೋಡು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೋಗೆಂದ್ರನಾಥರಿಗೆ ಮಾಹಿತಿ ನೀಡಲಾಗಿದೆ. ತಾಲೂಕಿನಲ್ಲಿ ಬೇರೆ ಕಡೆ ಈ ಕಾಯಿಲೆ ಕಂಡು ಬಂದಿಲ್ಲ.
ಜ್ವರ ಕಾಣಿಸಿಕೊಂಡ ತಕ್ಷಣವೇ ಸಾರ್ವಜನಿಕರು ಸ್ವಯಂ ಚಿಕಿತ್ಸೆ ಪಡೆಯದೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಹಾಗೂ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಾಲೂಕು ಆರೋಗ್ಯಧದಿಕಾರಿ ಡಾ. ಕೀರ್ತಿಕುಮಾರ್ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!