ಪ್ರಕಟಣೆ

ಕೈಗಾರಿಕೋದ್ಯಮಿಗಳ & ವೃತ್ತಿ ನಿರತರ ವಿ. ಸ.ಸಂಘಕ್ಕೆ ರೂ.1.10 ಕೋಟಿ ಲಾಭ.

ಸದಸ್ಯರಿಗೆ ಶೇ.18 ಡಿವಿಡೆಂಟ್, ಸೆ.4 ರಂದು ಮಹಾಸಭೆ.

ಕುಶಾಲನಗರ, ಸೆ 02:ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ಉತ್ತಮ ವಾಹೀವಾಟು ನಡೆಸಿ ರೂ.1.10 ಕೋಟಿ ನಿವ್ವಳ ಲಾಭಗಳಿಸುವ ಮೂಲಕ ಕಳೆದ 18 ವರ್ಷಗಳಿಂದ ಸತತ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.

ಬೈಪಾಸ್ ರಸ್ತೆಯಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ರೂ. 243ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು,ಅನುತ್ವಾದಕ ಆಸ್ತಿಗಳಿಗೆ ರೂ 46.69ಲಕ್ಷ, ಆದಾಯ ತೆರಿಗೆಗಳಿಗೆ ರೂ 17.93 ಲಕ್ಷ ಹಾಗೂ ಇತರೆ ಕಟ್ಟಡ ಮತ್ತು ಇತರ ಸವಕಳಿಗೆ ರೂ 48.16ಲಕ್ಷಗಳನ್ನು ಕಾಯ್ದಿರಿಸಿದೆ. ಸಂಘವು ರೂ 1.10ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿರುತ್ತದೆ. ಸಂಘವು ಕಳೆದ 18 ವರ್ಷಗಳಿಂದಲೂ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಬಾರಿ ಪ್ರಪ್ರಥಮವಾಗಿ ತನ್ನ ಲಾಭವನ್ನು ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುತ್ತೇವೆ. ಸದಸ್ಯರ ಅನುಕೂಲಕ್ಕೋಸ್ಕರ ಬೈಪಾಸ್ ರಸ್ತೆಯಲ್ಲಿರುವ 5 ಸೆಂಟ್ಸ್ ನಿವೇಶನದಲ್ಲಿ ತಳ ಅಂತಸ್ತು ಸೇರಿ 4 ಅಂತಸ್ತುಗಳ ಸುಸಜ್ಜಿತವಾದ, ಹವಾನಿಯಂತ್ರಿತ ಅತ್ಯಾಧುನಿಕ ಸುಸಜ್ಜಿತ ಕಟ್ಟಡ ಮತ್ತು ಸುಲಲಿತವಾಗಿ ಸದಸ್ಯರ ಸೇವೆಗೆ ಅನುಕೂಲವಾಗುವಂತೆ ಕೊಡಗು ಜಿಲ್ಲೆಯಲ್ಲಿಯೇ ಸಹಕಾರ ಸಂಘಗಳಲ್ಲಿ ಪ್ರಥಮವಾಗಿ ಎಟಿಎಂ ಹೊಂದಿರುವ ಸಂಘ ನಮ್ಮ ಸಂಘ ಎಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಸಂಘಕ್ಕೆ ನೂತನ ಆಸ್ತಿ ಜಾಗ 115/1 ಸರ್ವೆ ನಂ.ನ 2.36 ಏಕರೆಯಷ್ಟು ಏರಿಯದ, ರಾಷ್ಟ್ರೀಯ ಹೆದ್ದಾರಿಯಿಂದ 40 ಅಡಿ ಅಗಲದ ರಸ್ತೆಯನ್ನು ಇಂದಿರಾ ಬಡಾವಣೆ ತನಕ ಬಿಟ್ಟು ಸದ್ರಿ ರಸ್ತೆಗೆ ಹೊಂದಿಕೊಂಡಂತೆ ಮೂರನೇ ನಿವೇಶನದ ಏರಿಯ 20 ಸೆಂಟುಗಳಷ್ಟು ಹಾಗೂ ಅದರಲ್ಲಿ ಈ ಹಿಂದೆ ಆಸ್ಪತ್ರೆ ಕಟ್ಟಡಕ್ಕೆ ನಿರ್ಮಾಡಣಗೊಂಡಿರುವ ಅಂದಾಜು 43ಲಕ್ಷಗಳಷ್ಟು ಬೆಲೆ ಬಾಳುವ ಕಟ್ಟಡವನ್ನು ಒಳಗೊಂಡಂತೆ, 20 ಸೆಂಟು ಜಾಗ ಮತ್ತು ಕಟ್ಟಡಕ್ಕೆ ರೂ. 2 ಕೋಟಿ 5 ಲಕ್ಷಗಳನ್ನು ನೀಡಿ ಖರೀದಿಸಿರುತ್ತೇವೆ. ಈ ಆಸ್ತಿ ಖರೀದಿಯು ಸಂಘದ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ ಎಂದು ಹೇಳಿದರು. ಸಂಘವು ಕಳೆದ 2020-2021ನೇ ಸಾಲಿನಲ್ಲಿ 1235 ಸದಸ್ಯರಿಂದ ರೂ.3.30ಕೋಟಿಗಳ ಪಾಲು ಬಂಡವಾಳ ಸಂಗ್ರಹಿಸಿದೆ.ಈಗ 1263 ಸದಸ್ಯರನ್ನು ಹೊಂದಿದ್ದು, ಅವರಿಂದ ಪಾಲುಬಂಡವಾಳ ರೂ.3.41 ಕೋಟಿಗಳನ್ನು ಸಂಗ್ರಹಿಸಿ ಕಳೆದ ಸಾಲಿಗಿಂತ ರೂ.11ಲಕ್ಷಗಳಷ್ಟು ಹೆಚ್ಚಿಗೆ ಸಂಗ್ರಹಿಸಲಾಗಿದೆ. ಸಂಘವು ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು 2022ರ ಮಾರ್ಚ್ ಅಂತ್ಯಕ್ಕೆ ಒಟ್ಟು ರೂ.48.38 ಕೋಟಿಗಳಷ್ಟು ಠೇವಣಿಯನ್ನು ಸ್ವೀಕರಿಸಲಾಗಿದೆ.ಇದು ಕಳೆದ ಸಾಲಿಗಿಂತ ರೂ.5.69 ಕೋಟಿಗಳಷ್ಟು ಹೆಚ್ಚಿಗೆ ಠೇವಣಿಯನ್ನು ಸಂಗ್ರಹಿಸಿ ಪ್ರಗತಿ ಸಾಧಿಸಿ ಸಂಘದ ದುಡಿಯುವ ಬಂಡವಾಳವು ರೂ ಒಟ್ಟು ರೂ.52.73 ಕೋಟಿಗಳಿಂದ ರೂ.60.97 ಕೋಟಿಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ನಿರಖು ಠೇವಣಿಗಳಿಗೆ ಶೇ.7.5 ರಷ್ಟು ಅಧಿಕ ಬಡ್ಡಿಯನ್ನು ನೀಡುತ್ತಿದ್ದು, ಹಿರಿಯ ನಾಗರೀಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ, ಸಹಕಾರ ಸಂಘಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಶೇಕಡಾ 0.50 ಹೆಚ್ಚಿನ ಬಡ್ಡಿಯ ದರವನ್ನು ನೀಡುತ್ತಿದ್ದೇವೆ.
ಸಂಘದಲ್ಲಿ ಒಟ್ಟು ರೂ.3.21ಕೋಟಿಗಳಷ್ಟು ನಿಧಿಗಳಿದ್ದು ಇದರಲ್ಲಿ ಕ್ಷೇಮ ನಿಧಿ ರೂ.1.31ಕೋಟಿಗಳಷ್ಟು, ಕಟ್ಟಡ ನಿಧಿ 1.42 ಕೋಟಿಗಳಷ್ಟು, ಮರಣ ನಿಧಿ ರೂ.21.06ಲಕ್ಷಗಳಷ್ಟು, ಸಾಲಗಾರರ ಮರಣೋತ್ತರ ಪರಿಹಾರ ನಿಧಿ ರೂ.30.01 ಲಕ್ಷಗಳಷ್ಟು ಇರುತ್ತದೆ. ಸಂಘದಲ್ಲಿ ವಿವಿಧ ಸಾಲ ಯೋಜನೆಗಳಿದ್ದು,
ವ್ಯಾಪಾರಾಭಿವೃದ್ಧಿ ಮಾಸಿಕ ಕಂತಿನ ಸಾಲ ,ಜಾಮೀನು ಮಧ್ಯಂತರ ಸಾಲ, ಪಿಗ್ಮಿ ಮೀರಳತೆ(ಓ.ಡಿ) ಸಾಲ, ವ್ಯಾಪಾರ ಮೀರಳತೆ(3 ವರ್ಷ) ಸಾಲ, ಗೃಹ ನಿರ್ಮಾಣ ಸಾಲ, ಆಭರಣ ಸಾಲ , ವಾಹನ ಸಾಲ, ಮಹಿಳಾ ಚೇತನಾ ಗುಂಪು ಸಾಲ , ಅಭಯ ಗುಂಪು ಸಾಲ, ಶೈಕ್ಷಣಿಕ ಸಾಲ, ಪಾಲುಗಾರಿಕ ಸಂಸ್ಥೆಗಳಿಗೆ ರೂ1.50ಕೋಟಿಗಲಷ್ಟು ಸಾಲ ನೀಡುತ್ತಿದ್ದು. ಈ ಎಲ್ಲಾ ಸಾಲಗಳ ಮೂಲಕ ಸಂಘದಿಂದ ರೂ.44.84 ಕೋಟಿಗಳಷ್ಟು ಸಾಲವನ್ನು ಈ ಸಾಲಿನಲ್ಲಿ ವಿತರಿಸಿ, ಕಳೆದ ಸಾಲಿಗಿಂತ ರೂ.5.03 ಕೋಟಿಗಳಷ್ಟು ಹೆಚ್ಚುವರಿ ಸಾಲವನ್ನು ಸದಸ್ಯರುಗಳಿಗೆ ನೀಡಿರುತ್ತೇವೆ ಎಂದರು.
ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ಅಭ್ಯುದಯಕ್ಕಾಗಿ ಅವರುಗಳು ಸಣ್ಣಪುಟ್ಟ ವ್ಯಾಪಾರ ವಹಿವಾಟುಗಳನ್ನು ಮಾಡಲು ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ವೆಚ್ಚಕ್ಕಾಗಿ ತಮ್ಮ ಕುಟುಂಬದ ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯವಾಗುವ ರೀತಿಯಲ್ಲಿ ಮಹಿಳಾ ಚೇತನಾ ಸ್ವಸಹಾಯ ಗುಂಪು ಸಾಲ ಯೋಜನೆ ಪ್ರಾರಂಭಿಸಿ ಮಹಿಳೆಯರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ.2022 ರ ಮಾಚ್ರ್ ಅಂತ್ಯಕ್ಕೆ ಸಂಘದಿಂದ 216 ಗುಂಪುಗಳ 2113 ರಷ್ಟು ಮಹಿಳೆಯರಿಗೆ ಸಾಲ ವಿತರಿಸಿ ಈ ವರದಿಯ ದಿನಾಂಕಕ್ಕೆ ಒಟ್ಟು 8.92ಕೋಟಿಗಳಷ್ಟು ಸಾಲ ವಿತರಿಸಲಾಗಿದೆ.
ಸಂಘದ ‘ಎ’ ತರಗತಿ ಸದಸ್ಯರುಗಳು ತಮ್ಮ ಸ್ವಂತ ಕಟ್ಟಡದಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದು ಉತ್ತಮ ವ್ಯವಹಾರವನ್ನು ನಡೆಸುತ್ತಿರುವವರಿಗೆ ಹಾಲಿ ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ಪ್ರತಿಯೊಬ್ಬ ಸದಸ್ಯರಿಗೆ ವೈಯುಕ್ತಿಕ ಜಾಮೀನಿನ ಆಧಾರದ ಮೇಲೆ ವ್ಯಾಪಾರಾಭಿವೃದ್ಧಿ ಮಾಸಿಕ ಕಂತಿನ ಸಾಲ ರೂ.5,00,000/- ಜಾಮೀನು ಮಧ್ಯಂತರ ಸಾಲ ರೂ.2,00,000/- ಹಾಗೂ ಪಿಗ್ಮಿ ಸಾಮಾನ್ಯ ಸಾಲ ರೂ.1,00,000/-ಗಳನ್ನು ಸೇರಿಸಿ ಒಟ್ಟು ಒಬ್ಬ ಸದಸ್ಯನಿಗೆ ರೂ.8,00,000/-ಸಾಲ ವಿತರಿಸುತ್ತಿದ್ದು, ಈ ಸಾಲಗಳ ಜೊತೆಗೆ ಸದಸ್ಯರುಗಳಿಗೆ ದ್ವಿಚಕ್ರ, ತ್ರಿಚಕ್ರ ಹಾಗೂ 4ಚಕ್ರ ವಾಹನಗಳ ಖರೀದಿ ಸಾಲ, ಚಿನ್ನಾಭರಣ ಖರೀದಿ ಸಾಲ ಗೃಹ ಉಪಯೋಗಿ ವಸ್ತುಗಳ ಖರೀದಿ ಸಾಲ, ಗೃಹ ನಿರ್ಮಾಣ ಸಾಲ ನೀಡುತ್ತಿದ್ದು ಸದಸ್ಯರು ಮತ್ತು ಸದಸ್ಯೇತರರಿಗೆ ಚಿನ್ನಾಭರಣಗಳ ಈಡಿನ ಮೇಲೆ ಅಡಮಾನ ಸಾಲಗಳನ್ನು ಸಹ ನೀಡುತ್ತಿದ್ದು, ಸಂಘದ ಸದಸ್ಯರುಗಳ ಮತ್ತು ನಾಮಮಾತ್ರ ಸದಸ್ಯರ ಮಕ್ಕಳ ಮೇಲ್ಮಟ್ಟದ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಸಾಲವನ್ನು ಪ್ರಾರಂಭಿಸಿದ್ದು, ದೇಶದ ಒಳಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.20 ಲಕ್ಷಗಳಂತೆ, ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುವ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.50ಲಕ್ಷಗಳವರೆಗೆ ಶೈಕ್ಷಣಿಕ ಸಾಲವನ್ನು ನೀಡಲು ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು. ಸೂಕ್ತ ಪರಿವರ್ತಿತ ಮನೆ, ನಿವೇಶನ, ವಾಣಿಜ್ಯ ನಿವೇಶನ, ನಿರ್ಮಾಣಗೊಂಡಿರುವ ಮನೆಗಳು ಹಾಗೂ ಇನ್ನಿತರೆ ವಾಣಿಜ್ಯ ಆಸ್ತಿಗಳನ್ನು ಅಡಮಾನ ಮಾಡಿಕೊಂಡು ರೂ.15ರಿಂದ ರೂ.30ಲಕ್ಷಗಳವರೆಗೆ ಹಾಗೂ ನೊಂದಾಯಿತ ಕಂಪನಿ, ಪಾಲುಗಾರಿಕ ಸಂಸ್ಥೆಗಲಿಗೆ ರೂ.150ಕೋಟಿಗಳಷ್ಟು ಸಾಲ ನೀಡುತ್ತಿದ್ದೇವೆ. ಸಂಘದ ‘ಎ’ ತರಗತಿ ಮತ್ತು ನಾಮಮಾತ್ರ ಸದಸ್ಯರಿಗೆ ಪ್ರತಿ ದಿನ ಅತೀ ಶೀಘ್ರದಲ್ಲಿ ಆಭರಣ ಸಾಲವನ್ನು ನೀಡಲು ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಹೊಂದಿರುತ್ತದೆ. 2021-2022ನೇ ಸಾಲಿನಲ್ಲಿ ಲಾಭ ವಿಲೇವಾರಿಯಲ್ಲಿ ಸದಸ್ಯರಿಗೆ ಶೇ.18ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಿರುತ್ತೇವೆ ಸದಸ್ಯರು ಸಹಕರಿಸಬೇಕೆಂದು ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಮನವಿ ಮಾಡಿತು.
ಮಹಾಸಭೆ : ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.4 ರಂದು ಭಾನುವಾರ ಪೂರ್ವಾಹ್ನ 11.00 ಗಂಟೆಗೆ ಗಾಯಿತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಈ ಮಹಾಸಭೆಗೆ ಸರ್ವ ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷ ಶರವಣಕುಮಾರ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹೀರ್, ನಿರ್ದೇಶಕರಾದ ಎನ್.ಇ. ಶಿವಪ್ರಕಾಶ್ , ಜೋಸೇಫ್ ವಿಕ್ಟರ್ ಸೋನ್ಸ್, ಬಿ.ರಾಮಕೃಷ್ಣಯ್ಯ, ಕೆ.ಎಸ್.ಮಹೇಶ್, ನಾರಾಯಣ್ ಎಂ. ವಿ., ನಾಗೇಂದ್ರ ಬಾಬು , ಜಗದೀಶ್ , ಶರತ್ ಕೆ.ಪಿ. , ನವೀನ್ ಎಲ್., ಅಮೃತ್ ವಿ.ಸಿ.,ಸುರೇಶ್ ಕುಮಾರ್ ಕೆ. ,ಕವಿತ ಮೋಹನ್, ರೇಖಾ ಟಿ.ಆರ್.,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಜೇಸ್ ಬಿ.ಡಿ, ಸಂಘದ ವ್ಯವಸ್ಥಾಪಕ ರಾಜ ಆರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!