ಕುಶಾಲನಗರ, ನ 17:ಕನಕಜಯಂತಿ ಅಂಗವಾಗಿ ಭುವನಗಿರಿಯ ಶ್ರೀ ಭಕ್ತ ಕನಕದಾಸರು ಹಾಗೂ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ಪ್ರಥಮ ವರ್ಷದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ‘ಡಾ.ಮಂತರ್ ಗೌಡ ಕಪ್’ ಗೆ ಚಾಲನೆ ನೀಡಲಾಯಿತು.
ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಏರ್ಪಡಿಸಿದ್ದ ಪಂದ್ಯಾವಳಿಗೆ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಿ.ಆರ್.ಪ್ರಭಾಕರ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, 537ನೇ ಕನಕ ಜಯಂತಿ ಅಂಗವಾಗಿ ಎರಡು ದಿನಗಳ ಕಾಲ ಏರ್ಪಡಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ನೆರೆಜಿಲ್ಲೆಗಳ ಪ್ರತಿಭೆಗಳು ಪಾಲ್ಗೊಂಡಿದ್ದು, ಕ್ರೀಡಾಕೂಟ ಯಶಸ್ವಿಯಾಗಲು ಶುಭ ಹಾರೈಸಿದರು. ಕನಕದಾಸರು ಈ ಹಿಂದೆಯೇ ಕರೆ ನೀಡಿದಂತೆ, ಜಾತಿ ಬೇಧ ಇಲ್ಲದೆ ನಾವೆಲ್ಲರೂ ಒಂದೇ ಎಂಬಂತೆ ಎಲ್ಲರೂ ಒಗ್ಗೂಡಿ ಸಾಮರಸ್ಯದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರ ಚಿಂತನೆಯನ್ನು ಸಾಕಾರಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಈ ಸಂದರ್ಭ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಸಿ.ಕೆ.ಉದಯಕುಮಾರ್, ಉಪಾಧ್ಯಕ್ಷರಾದ ಭುವನಗಿರಿ ದೊಡ್ಡಯ್ಯ, ತೊರೆನೂರು ಚಿಕ್ಕಯ್ಯ, ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ಭರಮಣ್ಣ ಬೆಟಗೇರಿ, ತಾಲೂಕು ಉಪಾಧ್ಯಕ್ಷ ಮಲ್ಲೇಶ್, ಪಂದ್ಯಾವಳಿ ಆಯೋಜಕರಾದ ರವಿ, ಅಂಕುಷ್, ಚರಣ್ ಇದ್ದರು.
Back to top button
error: Content is protected !!