ಸಿದ್ದಾಪುರ, ಜೂ 16:: ಗಾಂಜಾ ಮಾರಾಟಕ್ಕೆ ಯತ್ನಿಸಿದ ಮೂವರು ಯುವಕರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಗೂಡುಗದ್ದೆ ಗ್ರಾಮದ ಧನುಷ್ (23), ಕರಡಿಗೋಡು ಗ್ರಾಮದ ಗೌತಮ್ (19) ಹಾಗೂ ನೆಲ್ಯಹುದಿಕೇರಿ ಗ್ರಾಮದ ಅನ್ಸಾದ್ (23) ಎಂದು ಗುರುತಿಸಲಾಗಿದೆ.
ನೆಲ್ಯಹುದಿಕೇರಿಯ ಕಾವೇರಿಸೇತುವೆ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಸಿದ್ದಾಪುರ ಠಾಣಾ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಸಂಧರ್ಭದಲ್ಲಿ ಸುಮಾರು 612 ಗ್ರಾಂ ಗಾಂಜಾ ,ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Back to top button
error: Content is protected !!