ಧಾರ್ಮಿಕ

ಬಾರವಿ ಕಾವೇರಿ‌ ಕನ್ನಡ ಸಂಘದ ವತಿಯಿಂದ ಕಾವೇರಿ ಹುಣ್ಣಿಮೆ ಪೂಜಾ ಕಾರ್ಯಕ್ರಮ

ಕುಶಾಲನಗರ, ಜೂ 01: ಬಾರವಿ ಕಾವೇರಿ‌ ಕನ್ನಡ ಸಂಘದ ವತಿಯಿಂದ ಕಾವೇರಿ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ‌‌ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 158ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.

ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕಾವೇರಿ ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ
ಮಹಾಮಂಗಳಾರತಿ‌ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಉತ್ತಮ ಮಳೆ ಬೆಳೆ, ನಾಡಿನ ಸಮೃದ್ದಿಗಾಗಿ ಪ್ರಾರ್ಥಿಸಲಾಯಿತು.

ಬೆಂಗಳೂರಿನ ಸುನಂದ ಕೌಶಿಕ್ ಪೂಜಾ ಸೇವಾರ್ಥ ನೆರವೇರಿಸಿದರು.

ಈ ಸಂದರ್ಭ ಬಾರವಿ ಸಂಘದ ರವೀಂದ್ರ ಪ್ರಸಾದ್, ಎಸ್.ಎಲ್.ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಲಾಯುಧಮ್ ಮಾತನಾಡಿದರು.
ಸತೀಶ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.
ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭ ಎಸ್.ಎಲ್.ಎನ್.ವ್ಯವಸ್ಥಾಪಕ‌ ನಿರ್ದೇಶಕ ಸಾತಪ್ಪನ್, ಪ್ರಮುಖರಾದ ಕನ್ನಕಿ, ಬಾರವಿ ಕಾವೇರಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಇ.ಟಿ.ಚಂದ್ರು, ರಾಜರಾಜೇಶ್ವರಿ ಚಂದ್ರು, ತಿಲಕ್ ಪೂಜಾರಿ, ಕಾವೇರಿ‌ಮಣಿ, ರುದ್ರೇಶ್, ವಿನಯ್ ಮುತ್ತಿನ ಮುಳ್ಳುಸೋಗೆ, ಮಹಾತ್ಮಾ, ಶಂಕರ್ ಕೊಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!