ಕೂಡಿಗೆ,ಜೂ. 27: ಕುಶಾಲನಗರದ ಶ್ರೀ ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದ ವತಿಯಿಂದ ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸದ ಪೂಜ್ಯೋತ್ಸವು ಶ್ರಧ್ಧಾಭಕ್ತಿಯಿಂದ ,ವಿವಿಧ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು.
ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 5.00 ಗಂಟೆಗೆ ಗಣಪತಿ ಹೋಮ, ಧ್ವಜಾರೋಹಣ, ನಂತರ ಸಮುದಾಯದ ಭಾಂಧವರು ಕಾವೇರಿ ನದಿಗೆ ತೆರೆಳಿ ನದಿಯಲ್ಲಿ ಗಂಗಾಪೂಜೆ, ನಂತರ ಕಾವೇರಿ ನದಿಯಿಂದ ಕಳಸ ಹೊತ್ತವರು, ಸೇರಿದಂತೆ ಭಕ್ತರು ನಗರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ, ಮೆರವಣಿಯ ಜೊತೆಯಲ್ಲಿ ಜಾನಪದ ವೀರಗಾಸೆ ನೃತ್ಯ,ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಲುಪಲಾಯಿತು..
ನಂತರ ಮಧ್ಯಾಹ್ನ 12. 30 ಕ್ಕೆ ದೇವಾಲಯದಲ್ಲಿ ದೇವಿಗೆ ಪೂಜಾ ವಿಧಿ ವಿಧಾನಗಳು ಸೇರಿದಂತೆ ಅನೇಕ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅನ್ನಸಂರ್ತಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಾಂಗ ಸಂಘದ ಅಧ್ಯಕ್ಷರಾದ ಡಿ.ವಿ. ರಾಜೇಶ್, ಉಪಾಧ್ಯಕ್ಷರಾದ ಡಿ. ಆರ್. ಸೋಮಶೇಖರ್ ಡಿ.ವಿ. ಚಂದ್ರು(ರಾಕಿ), ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ. ವಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ. ಎನ್. ವಿನೋದ್, ಜಂಟಿ ಕಾರ್ಯದರ್ಶಿ ಡಿ. ಆರ್. ಜಯಂತ್
ಗೌರವ ಸಲಹೆಗಾರರಾದ ಡಿ.ಟಿ. ವಿಜಯೆಂದ್ರ, ಡಿ.ಎಸ್ ಜಗದೀಶ್, ಡಿ.ಎಸ್. ಕೋದಂಡರಾಮ, ಡಿ.ಟಿ. ನಾಗ್ರೇಂದ್ರ, ಡಿ.ಕೆ. ತಿಮ್ಮಪ್ಪ, ಡಿ.ಸಿ. ಜಗದೀಶ್, ಡಿ.ಸಿ. ಪ್ರಭಾಕರ್, ಹೆಚ್. ಎನ್. ಯೋಗೇಶ್, ಮಹಿಳಾ ಅಧ್ಯಕ್ಷರಾದ ಪದ್ಮಮಹೇಶ್, ಪ್ರಮುಖರಾದ ಶುಭ ರವಿಕುಮಾರ್, ರೂಪ ಕುಮಾರ್, ಶೋಭಾ ಅನಿಲ್, ಗೀತಾ ಸೋಮಶೇಖರ್, ಶೋಭ ಸೋಮಶೆಟ್ಟಿ, ಯುವಕ ಸಂಘದ ಡಿ.ಎಸ್. ಯತಿರಾಜ್, ಡಿ.ಪಿ.ಮಧು, ಡಿ. ಪಿ.ಗಣೇಶ್, ಡಿ.ಟಿ. ರವಿಶಂಕರ್, ಡಿ.ವಿ ಲಕ್ಷಿತ್ ಸೇರಿದಂತೆ ಸಮಿತಿಯ ನಿರ್ದೇಶಕರುಗಳು, ಸಂಘದ ಸದಸ್ಯರುಗಳು ಹಾಜರಿದ್ದರು.
ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕರಾದ ಎಂ.ಆರ್. ಪ್ರಸನ್ನ ಕುಮಾರ್ ನೆರವೇರಿಸಿದರು
ಸಂಜೆ 6.00 ಗಂಟೆಗೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯ ಮುಂದೆ ವೀರಗಾಸೆ ನೃತ್ಯ, ಮಂಗಳ ವಾದ್ಯದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ದೇವಾಲಯದ ಆವರಣದಿಂದ ಬೈಜನಹಳ್ಳಿನವರೆಗೆ ನಗರದ ಪ್ರಮುಖ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿತು , ಈ ಸಂದರ್ಭದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನವು ನಡೆಯಿತು. ನಂತರ ಮೆರವಣಿಗೆಯು ಸ್ವ ಸ್ಧಳ ದೇವಾಲಯದ ಆವರಣಕ್ಕೆ ಬಂದು ಸೇರಿತು. ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ಈ ಬಾರಿ ದೇವಸ್ಥಾನ ಸಮಿತಿ ವತಿಯಿಂದ ಶ್ರೀ ದೇವಿಯ ವಾರ್ಷಿಕೋತ್ಸವದ ದಿನ ಬರುವ ನಮ್ಮ ಊರಿನಿಂದ ಮದುವೆಯಾಗಿ ಬೇರೆ ಊರುಗಳಲ್ಲಿ ನೆಲೆಸಿರುವ ಹೆಣ್ಣು ಮಕ್ಕಳಿಗೆ ಗೌರವ ಪೂರಕವಾಗಿ ಮಡಿಲಕ್ಕಿ ಕೊಡುವ ಧಾರ್ಮಿಕ ಸಾಂಪ್ರದಾಯವನ್ನು ನೆರವೇರಿಸಲಾಯಿತು.
Back to top button
error: Content is protected !!