ಅಪಘಾತ

ಅಪಘಾತದಲ್ಲಿ ಮೃತಪಟ್ಟ ಅನಿಲ್ ಅಂತ್ಯಕ್ರಿಯೆ: ಪೊಲೀಸ್ ಇಲಾಖೆ ವೈಫಲ್ಯ ಆರೋಪ: ಪ್ರತಿಭಟನೆ

ಕುಶಾಲನಗರ, ಮಾ 30: ಬೈಲುಕೊಪ್ಪ ಸರಕಾರಿ ಶಾಲೆ ಮುಂಭಾಗ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಹಿಟ್ ಅಂಡ್ ರನ್ ಗೆ ಬಲಿಯಾದ ಕೊಪ್ಪ ನಿವಾಸಿ ಅನಿಲ್ (33) ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೊಪ್ಪ ಕಡೆಯಿಂದ ಬೈಲುಕೊಪ್ಪ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ಅನಿಲ್ ವಾಹನ ಮುಂಭಾಗ ಚಲಿಸುತ್ತಿದ್ದ ಆಟೋ ಗೆ ಅಪರಿಚಿತ ಕಾರು ಡಿಕ್ಕಿಯಾಗಿದೆ. ಈ ಸಂದರ್ಭ ಆಟೋ ಹಿಂದೆ ಬೈಲ್ ನಿಲ್ಲಿಸಿದ್ದ ಅನಿಲ್ ಮೇಲೆ ಆಟೋ ಬಿದ್ದಿದೆ ಮಾತ್ರವಲ್ಲದೆ ಕಾರು ಅನಿಲ್ ಎದೆ ಮೇಲೆ ಹಾದು ಹೋಗಿದೆ. ಇದರಿಂದ ಘಾಸಿಗೊಂಡ ಅನಿಲ್ ಮೃತಪಟ್ಟಿದ್ದಾರೆ.

ಘಟನೆ ನಡೆದು 24 ಗಂಟೆ ಕಳೆದರೂ ಅಪಘಾತ ನಡೆಸಿದ ಕಾರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಮೃತನ ಸಂಬಂಧಿಕರು, ಸ್ನೇಹಿತರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಅಪಘಾತ ನಡೆದ ಸ್ಥಳದಲ್ಲಿ ನಿರ್ಮಿಸಿರುವ ರೋಡ್ ಡಿವೈಡರ್ ಅನಾವಶ್ಯಕವಾಗಿದ್ದು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇದರ‌ ನಡುವೆ
ನೀರಾವರಿ ನಿಯಮದಿಂದ ನಡೆಯುತ್ತಿದ್ದ ಪೈಪ್ ಲೈನ್ ಕಾಮಗಾರಿ ಹಿನ್ನೆಲೆ ಒಂದು‌ ಭಾಗದಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶವಿದ್ದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.
ಮೃತ ಅನಿಲ್ ಹೈ ವೋಲ್ಟೇಜ್ ಎಂಬ ಖಾಸಗಿ ಕೇಂದ್ರದಲ್ಲಿ ಸಿಬ್ಬಂದಿಯಾಗಿದ್ದ. 10 ತಿಂಗಳ ಗಂಡು ಮಗು ಸೇರಿದಂತೆ ಪತ್ನಿ, ಪೋಷಕರನ್ನು ಅಗಲಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತನ ಮರಣೋತ್ತರ ಪರೀಕ್ಷೆ ನೆರವೇರಿಸಲಾಯಿತು. ಮೃತನ ಮರಣದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಮುಂಭಾಗ ರಸ್ತೆ ತಡೆ ಹಾಗೂ ಪ್ರತಿಭಟನೆ ಕೂಡ ನಡೆಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!