ಕುಶಾಲನಗರ, ಜು 04: ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಹೃದಯ ತಜ್ಞ ಡಾ.ಹರ್ಷ ಎಂಬವರು ಮೈಸೂರಿನಿಂದ ಕುಶಾಲನಗರದತ್ತ ಆಗಮಿಸುತ್ತಿದ್ದ ಸಂದರ್ಭ ಕುಶಾಲನಗರದ ಹೃದಯಭಾಗದಲ್ಲಿ ರಸ್ತೆ ಮಧ್ಯದಲ್ಲೇ ಕಾರು ಆಫ್ ಆಗಿದೆ. ನೋಡುತ್ತಿದ್ದಂತೆ ದಿಢೀರನೇ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಹೋಟೆಲ್, ಅಂಗಡಿಗಳಿಂದ ನೀರು ತಂದು ಸುರಿದು ಬೆಂಕಿ ನಂದಿಸಲು ಯತ್ನಿಸಿದರೂ ಸಫಲವಾಗಲಿಲ್ಲ. ಈ ಸಂದರ್ಭ ಅಗ್ನಿ ಶಮಕ ಅನಿಲ ಬಳಸಿ ಬೆಂಕಿ ನಂದಿಸಲಾಯಿತು. ಘಟನೆಯಲ್ಲಿ ವೈದ್ಯರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಹುಂಡೈ ಕಾರು ಬಹುತೇಕ ಹಾನಿಗೊಂಡಿದೆ.
Back to top button
error: Content is protected !!