ಪ್ರಕಟಣೆ

ಏಪ್ರಿಲ್ 26 ರಂದು ಮೈಸೂರಿನಲ್ಲಿ‌‌ ಉಚಿತ ಸಾಮೂಹಿಕ‌ ವಿವಾಹ: ನೋಂದಣಿಗೆ ಮನವಿ

ಕುಶಾಲನಗರ, ಮಾ 31: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಏಪ್ರಿಲ್ 26 ರಂದು ಭಾನುವಾರ ಮೈಸೂರಿನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಡಾ.ನಯನ ಹರಿಶ್ಚಂದ್ರ ಅವರು ತಿಳಿಸಿದ್ದಾರೆ.
ಪರಿಷತ್ತಿನ‌ ಸ್ಥಾಪಕ ಅಧ್ಯಕ್ಷ ಡಾ.ಕಸ್ತೂರಿ ಚಂದ್ರು ಅವರ ನೇತೃತ್ವದಲ್ಲಿ ಮೈಸೂರಿನ ಅಶೋಕ ರಸ್ತೆಯ ಬಸ್ ಸ್ಟ್ಯಾಂಡ್ ಪಕ್ಕದ ಗೀತಾ ಮಂದಿರದಲ್ಲಿ ನಡೆಯಲಿರುವ
ಉಚಿತ ವಿವಾಹ‌ ಕಾರ್ಯಕ್ರಮದಲ್ಲಿ ಆಸಕ್ತಿ ಹೊಂದಿರುವ‌ ಕೊಡಗಿನವರು ಆದಷ್ಟು ಶೀಘ್ರದಲ್ಲೇ ನೋಂದಣಿ ಮಾಡಿಕೊಳ್ಳುವಂತೆ ಕೋರಿದ್ದಾರೆ. ಅಲ್ಲದೆ ಕೊಡಗಿನಿಂದ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಶುಭ ಕಾರ್ಯದಲ್ಲಿ ಪಾಲ್ಗೊಂಡು ವಧುವರರನ್ನು ಹಾರೈಸಬೇಕಿದೆ ಎಂದು ನಯನ ಅವರು ಮನವಿ‌ ಮಾಡಿದ್ದಾರೆ.
ಹೆಚ್ಚಿನ‌ ಮಾಹಿತಿಗೆ ಹಾಗೂ‌ ನೋಂದಣಿಗೆ 8867688676, 9448201227 ಸಂಪರ್ಕಿಸಲು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!