ಕುಶಾಲನಗರ, ಮಾ 19: ಗೊಂದಿಬಸವನಹಳ್ಳಿ ಗ್ರಾಮದ ಶ್ರೀ ಶನೈಶ್ವರಸ್ವಾಮಿ ವಾರ್ಷಿಕ ಪೂಜೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.
ಶ್ರೀ ಶನೈಶ್ವರಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಪೂಜಾ ವಿಧಿಗಳು ನೆರವೇರಿಸಲಾಯಿತು.
ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ಕಳಸ ಹೊತ್ತ ಮಹಿಳೆಯರು ಮಕ್ಕಳಾದಿಯಾಗಿ ವಾದ್ಯಗೋಷ್ಢಿ ಸಮ್ಮುಖದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಮಾರ್ಗದುದ್ದಕ್ಕೂ ಭಕ್ತರು ಪೂಜೆ ನೆರವೇರಿಸಿದರು.
ದೇವಾಲಯ ಪ್ರಧಾನ ಅರ್ಚಕ ಮನೋಜ್ ಕುಮಾರ್, ಅರ್ಚಕ ಗೌಡಯ್ಯ ನೇತೃತ್ವದಲ್ಲಿ ಪೂಜಾ ವಿಧಿಗಳು ಜರುಗಿದವು.
ಈ ಸಂದರ್ಭ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜು, ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ
ಮಧುಕುಮಾರ್, ಪ್ರದೀಪ್, ಹರೀಶ, ಪ್ರಕಾಶ, ಯೋಗೇಶ, ಪ್ರಸನ್ನ, ಪುನಿತ್ ಸೇರಿದಂತೆ ಭಕ್ತಾದಿಗಳು ಇದ್ದರು.
Back to top button
error: Content is protected !!