ಕುಶಾಲನಗರ, ಮಾ 19: ಮುಳ್ಳುಸೋಗೆಯಲ್ಲಿ ವೇಶ್ಯಾವಾಟಿಕೆ ಪ್ರಕರಣ ಬೇಧಿಸಿದ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಸೆಲೆಕ್ಟ್ ಸಾಮಿಲ್ ಬಳಿಯ ಮನೆಯೊಂದನ್ನು ಬಾಡಿಗೆ ಪಡೆದ ಗುಮ್ಮನಕೊಲ್ಲಿ ನಿವಾಸಿ ಕಲಾವತಿ ಎಂಬವರು ಇಬ್ಬರು ವಿವಾಹಿತ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಸಾರ್ವಜನಿಕರ ದೂರಿನನ್ವಯ ದಾಳಿ ನಡೆಸಿದ ಕುಶಾಲನಗರ ಟೌನ್ ಪೊಲೀಸರು ಮೈಸೂರು ಮತ್ತು ಸೋಮವಾರಪೇಟೆಯ ಮಹಿಳೆಯರನ್ನು ಮಡಿಕೇರಿ ಸಾಂತ್ವನ ಕೇಂದ್ರಕ್ಕೆ ದಾಖಲಿಸಿ ವ್ಯವಹಾರ ನಡೆಸುತ್ತಿದ್ದ ಕಲಾವತಿಯನ್ನು ಬಂಧಿಸಿದ್ದಾರೆ.
ಇದೇ ಕಲಾವತಿ ಎಂಬವರನ್ನು 2018-19ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
Back to top button
error: Content is protected !!