ಕುಶಾಲನಗರ, ಜ 27: ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರ ಕೂಡ್ಲೂರು ವೃತ್ತದಲ್ಲಿ ಸಾರಿಗೆ ಬಸ್ ಗಳು ನಿಲುಗಡೆಗೊಳ್ಳದೆ ಕಾರ್ಮಿಕರಿಗೆ ಅನಾನುಕೂಲ ಉಂಟುಮಾಡುತ್ತಿದೆ. ಈ ಕೇಂದಲ್ಲಿರುವ 40 ಕ್ಕೂ ಅಧಿಕ ಕಾಫಿ ಸಂಸ್ಕರಣಾ ಘಟಕಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಕಾರ್ಮಿಕರು ಸುತ್ತಮುತ್ತಲ ಗ್ರಾಮಗಳಿಂದ ಕೆಲಸಕ್ಕೆ ಆಗಮಿಸುತ್ತಾರೆ. ಆದರೆ ಸಾರಿಗೆ ಬಸ್ ನಲ್ಲಿ ಆಗಮಿಸುವ ಸಂದರ್ಭ ಕೂಡ್ಲೂರು ವೃತ್ತದಲ್ಲಿ ಬಸ್ ನಿಲುಗಡೆಗೊಳಿಸುತ್ತಿಲ್ಲ. ಬದಲಾಗಿ ದೂರದ ಕೂಡಿಗೆಯಲ್ಲಿ ಮಾತ್ರ ಬಸ್ ನಿಲುಗಡೆಗೊಳ್ಳುವ ಕಾರಣ ಅಲ್ಲಿಂದ ಈ ಕೇಂದ್ರಕ್ಕೆ ನಡೆದುಕೊಂಡು ಅಥವಾ ಆಟೋದಲ್ಲಿ ಬರುವ ಪರಿಸ್ಥಿತಿ ಎದುರಾಗಿದೆ. ಇದು ಇಲ್ಲಿನ ಕಾರ್ಮಿಕರಿಗೆ ತೀವ್ರ ಅನಾನುಕೂಲ ಉಂಟುಮಾಡಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪರಿಹಾರ ಲಭಿಸಿಲ್ಲ ಎಂದು ಸಿಐಟಿಯು ನ ಇಂಡಸ್ಟ್ರಿಯಲ್ ಏರಿಯಾದ ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ದೂರಿದ್ದಾರೆ. ಮಾನವೀಯ ದೃಷ್ಠಿಯಿಂದ ಬಡ ಕಾರ್ಮಿಕರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕೂಡ್ಲೂರು ವೃತ್ತದಲ್ಲಿ ಸಾರಿಗೆ ಬಸ್ ನಿಲುಗಡೆಗೆ ಕ್ರಮವಹಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Back to top button
error: Content is protected !!