ಕಾರ್ಯಕ್ರಮ

ರಂಗಸಮುದ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ

ಕುಶಾಲನಗರ, ಜ 02:ದಿ:1/1/2026 ರ ಗುರುವಾರದಂದು ಕುಶಾಲನಗರ ತಾಲೂಕಿನ ರಂಗಸಮುದ್ರದ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ 2008ನೇ ಭೀಮ ಕೋರೆಗಾಂವ್ ವಿಜಯೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲಿ

ಸಮಿತಿಯ ಗೌರವಾಧ್ಯಕ್ಷರಾದ ವಿಜಯಾನಂದರವರು ಪ್ರಧಾನ ಕಾರ್ಯದರ್ಶಿಯಾದ ನಂದೀಶ್ ಕುಮಾರ್ ರವರು ಮತ್ತು ಗ್ರಾಮದ ಮುಖಂಡರಾದ ಗಿರೀಶ್, ಸ್ವಾಮಿ, ಪ್ರಭ,ರವರು ಹಾಗೂ ಮಹೇಂದ್ರ ಎಂ ಎಸ್ ರವರ ಅಧ್ಯಕ್ಷತೆಯಲ್ಲಿ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ನಂತರ ಭೀಮ ಕೋರಂಗ ವಿಯೋತ್ಸವವನ್ನು ಕುರಿತು ಪದಾಧಿಕಾರಿಯಾದ ಸುನಿಲ್ ಕುಮಾರ್ ಜಿ ಇವರು ತಮ್ಮ ಭಾಷಣದ ಮೂಲಕ ಕಾರ್ಯಕ್ರಮದ ಉದ್ದೇಶ ಮತ್ತು ಜನವರಿ ಒಂದರ ವಿಶೇಷತೆಯನ್ನು ತಿಳಿಸುವುದರೊಂದಿಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ್ ಜಿ. ದೊಡ್ಡಯ್ಯ, ನಟರಾಜು, ಭಾಸ್ಕರ್ ರಾವ್, ರಾಜೇಶ್, ರಾಜಕುಮಾರ್ ಮೇಟಿ, ಆನಂದ್, ನಿತಿನ್, ಮಂಜುನಾಥ್ ಪಿ, ಇತರರೊಂದಿಗೆ ಸ್ಥಳೀಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!