ಕ್ರೀಡೆ

ಕೂಡಿಗೆಯ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ಕಂಚಿನ ಪದಕ: ವಿಜಯೋತ್ಸವ

ಕುಶಾಲನಗರ, ಜ 02:
ಕೂಡಿಗೆಯ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆ ಇಲ್ಲಿನ 6ನೇ ತರಗತಿ ವಿದ್ಯಾರ್ಥಿ ಕುನಾಲ್ ಟಿ ಪಿ ಯು ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದ 69 ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ 20 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿರುತ್ತಾರೆ.
ಇವರು ಯಡವನಾಡು ಗ್ರಾಮದ ಶ್ರೀಯುತ ಪ್ರಕಾಶ್ ಟಿ ಕೆ ಮತ್ತು ಶ್ರೀಮತಿ ಹೇಮಾ ಟಿ ಪಿ ರವರ ಪುತ್ರನಾಗಿದ್ದು, ಇವರಿಗೆ ಜ್ಞಾನೋದಯ ಶಾಲೆಯ ಕರಾಟೆ ತರಬೇತುದಾರರಾದ ಶ್ರೀಯುತ ಪ್ರಮೋದ್ ರವರು ತರಬೇತಿ ನೀಡಿರುತ್ತಾರೆ.
ಕಂಚಿನ ಪದಕ ವಿಜೇತ ಕುನಾಲ್ ಹಾಗೂ ತರಬೇತುದಾರರಾದ ಪ್ರಮೋದ್ ರವರನ್ನು ಸನ್ಮಾನಿಸಿ, ಕೂಡಿಗೆಯ ವೃತ್ತದಿಂದ ಜ್ಞಾನೋದಯ ಶಾಲೆಯವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಕೂಡಿಗೆಯ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತು ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿರುವ
ವಿ ಪಿ ಶಶಿಧರ್, ಕೂಡಿಗೆಯ ಪಂಚಾಯತಿ ಸದಸ್ಯರು ಸ್ಥಳೀಯ ಮುಖಂಡರಾದ ಟಿ ಪಿ ಹಮೀದ್, ರಾಮೇಶ್ವರ ಸಹಕಾರ ಸಂಘದ ಉಪಾಧ್ಯಕ್ಷರಾದ ಬಸಪ್ಪ.. ನಿರ್ದೇಶಕರಾದ ರಾಜು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಡಾ. ಸದಾಶಿವಯ್ಯ ಎಸ್ ಪಲ್ಲೆದ, ಸಸಂಪದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಮುಖ್ಯಸ್ಥರಾದ ಸೌಭಾಗ್ಯ ಲಕ್ಷ್ಮಿ ಎಸ್ ಪಲ್ಲೆದ್, ಜ್ಞಾನೋದಯ ಶಾಲೆ ಮುಖ್ಯೋಪಾಧ್ಯಾಯನಿ ಶ್ರೀಮತಿ ಸೆಲ್ವಿ, ಸಮೂಹ ಸಂಪನ್ಮೂಲ ವ್ಯಕ್ತಿ ಶಾಂತಕುಮಾರ್ ಯಡವನಾಡು ಆಶ್ರಮ ಶಾಲೆಯ ಮುಖ್ಯ ಶಿಕ್ಷಕರಾದ ರಜನಿಕಾಂತ್,ಹಿರಿಯರಾದ ರಾಜೇಗೌಡ ರವರು ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವರ್ಗದವರು, ಪೋಷಕರು, ಸಾರ್ವಜನಿಕರು
ಪಾಲ್ಗೊಂಡು ಶುಭ ಹಾರೈಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!