ಕುಶಾಲನಗರ, ಏ 04: ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 136ನೇ ಜಯಂತಿಯ ಅಂಗವಾಗಿ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗಿತ್ತು.
ಹೊಸಪಟ್ಟಣದ ಮೈದಾನದಲ್ಲಿ ನಡೆದ ನಂಜರಾಯಪಟ್ಟಣ ಗ್ರಾಪಂ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಗೆ ನಂಜರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ, ಸದಸ್ಯರಾದ ಆರ್.ಕೆ.ಚಂದ್ರ, ರಕ್ಷಿತ್ ಮಾವಜಿ, ಪಾಕ್ಸ್ ಅಧ್ಯಕ್ಷ ಮುರಳಿ ಮಾದಯ್ಯ ಚಾಲನೆ ನೀಡಿದರು.
ಒಟ್ಟು 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಟೀಂ ಸಹಾರ ಮತ್ತು ಕರೆಂಟ್ ಶಾಕರ್ಸ್ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಬಿಲಾಲ್ ಮತ್ತು ಸುಮೇರ್ ಮಾಲೀಕತ್ವದ ಸಹಾರ ತಂಡ ಪ್ರಥಮ, ಕರೆಂಟ್ ಶಾಕರ್ಸ್ ದ್ವಿತೀಯ, ವೈಲ್ಡ್ ಕ್ಯಾಟ ತಂಡ ತೃತೀಯ, ರೈಸಿಂಗ್ ಸ್ಟಾರ್ ನಾಲ್ಕನೇ ಬಹುಮಾನ ಪಡೆಯಿತು.
ಈ ಸಂದರ್ಭ ಜೈ ಭೀಮ್ ಬ್ರದರ್ಸ್ ನ ಅರುಣೇಶ್, ನಿತನ್, ಯೋಗೇಶ ಮನೋಜ್, ಪ್ರತಾಪ್, ದಾನಿಗಳು ಹಾಗೂ ಪ್ರಮುಖರಾದ ಅನುಪಮಾ, ಪದ್ಮಿನಿ, ರಕ್ಷಿತ್, ಇರ್ಷಾದ್, ಮಂಜು, ಉದಯಕುಮಾರ್, ಬಿಲಾಲ್, ಕಬೀರ್, ನಡುಮನೆ ಚಿಂತು, ಮನೇಶ್, ಮ್ಯಾಥ್ಯು, ಮೋಹನ್ ಸೇರಿದಂತೆ ತಂಡಗಳ ಮಾಲೀಕರು, ಆಟಗಾರರು ಇದ್ದರು.
ವಿಜೇಶ್ ಮತ್ತು
ಅಜಯ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
Back to top button
error: Content is protected !!