ಮನವಿ

ಕಸ ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಕೋರಿ SLN ಸಂಸ್ಥೆಗೆ ಮನವಿ ಮಾಡಿದ ಭಾಸ್ಕರ್ ನಾಯಕ್

ಕುಶಾಲನಗರ, ಡಿ 27:ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡುವ ಸಲುವಾಗಿ ಟ್ರ್ಯಾಕ್ಟರ್ ಅವಶ್ಯಕತೆ ಇದ್ದು ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು ಕೂಡ್ಲೂರು ಕೈಗಾರಿಕಾ ಪ್ರದೇಶದ SLN ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಾತಪ್ಪನ್ ರವರಿಗೆ ಮನವಿ ಮಾಡಿದರು ಈ ಕುರಿತು ಮಾತನಾಡಿದ ಭಾಸ್ಕರ ನಾಯಕ್ ರವರು ನಮ್ಮ ಕೊಡಗು ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವಂತ ಹಾಗೂ ದೊಡ್ಡ ಗ್ರಾಮ ಪಂಚಾಯತಿಯು ಆಗಿರುವುದರಿಂದ ನಮ್ಮ ಕೂಡುಮಂಗಳೂರು ಪಂಚಾಯತಿ ವ್ಯಾಪ್ತಿಯ 7 ಗ್ರಾಮಗಳಲ್ಲಿ ದಿನನಿತ್ಯ ಕಸ ವಿಲೇವಾರಿ ಮಾಡಲು ವಾಹನಗಳು ಇಲ್ಲದೆ ಸಮಸ್ಯೆ ಉಂಟಾಗುತ್ತಿದ್ದು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಮೂಲಭೂತ ಸೌಕರ್ಯಕ್ಕೆ ಸಹಕರಿಸಿದಂತ ಕೈಗಾರಿಕಾ ಪ್ರದೇಶದ SLN ಸಂಸ್ಥೆಯ ಮುಖ್ಯಸ್ಥರಿಗೆ

ಟ್ರ್ಯಾಕ್ಟರ್ ನ ಅವಶ್ಯಕತೆ ಕುರಿತು ಮನವರಿಕೆ ಮಾಡಿದ್ದು ತಕ್ಷಣ ಸ್ಪಂಧಿಸಿದ SLN ಸಂಸ್ಥೆ ಟ್ರ್ಯಾಕ್ಟರನ್ನು ಖರೀದಿಸಿದ್ದು ದಿನಾಂಕ 1/1/2026 ರಂದು ಸಂಸ್ಥೆಯ ಆವರಣದಲ್ಲಿ ನಮ್ಮ ಗ್ರಾಮ ಪಂಚಾಯಿತಿಗೆ ವಿತರಿಸಲು ಸಂಸ್ಥೆ ಸಿದ್ಧತೆ ಮಾಡಿಕೊಂಡಿರುವುದಾಗಿ ಸಂಸ್ಥೆಯು ತಿಳಿಸಿದ್ದು ಪಂಚಾಯತಿ ವ್ಯಾಪ್ತಿಯ ಸರ್ವ ಗ್ರಾಮಸ್ಥರ ಪರವಾಗಿ SLN ಸಂಸ್ಥೆಗೆ ಧನ್ಯವಾದಗಳು ತಿಳಿಸಿದರು ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಹಾಗೂ SLN ಸಂಸ್ಥೆಯ ವೆಂಕಟಚಲಂ ಸಾತಪ್ಪನ್, ಮೇಲಾಯಿದಂ ಮಣಿ, ಮೋಹನ್ ದಾಸ್, ಶ್ರೀ ವಿದ್ಯಾ
ರವರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!