ಮನವಿ

ಸುಂದರನಗರದಲ್ಲಿ ಸರ್ವೆ ಕಾರ್ಯ

ಕುಶಾಲನಗರ, ಏ 08: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಸುಂದರನಗರ ಕೋರೆ ರಸ್ತೆ ವ್ಯಾಪ್ತಿಯ ಹಕ್ಕುಪತ್ರ ವಂಚಿತ ನಿವಾಸಿಗಳ ಸಮ್ಮುಖದಲ್ಲಿ ಅರಣ್ಯ ಇಲಾಖೆ ಹಾಗೂ ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯ ನಡೆಯಿತು.

ಹಕ್ಕುಪತ್ರ ಒದಗಿಸಲು ಕೋರಿ ನಿವಾಸಿಗಳು ಸಲ್ಲಿಸಿದ
ಬೇಡಿಕೆ ಮೇರೆಗೆ ತಹಸೀಲ್ದಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸರ್ವೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಅದರಂತೆ ಬುಧವಾರ ಸರ್ವೆ ಕಾರ್ಯ ನಡೆದಿದೆ ಎಂದು ಹೋರಾಟದ ನೇತೃತ್ವ ವಹಿಸಿರುವ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜ್ ತಿಳಿಸಿದರು.

ಕಳೆದೆರೆಡು ತಿಂಗಳಿಂದ ನಾವು ಕೈಗೊಂಡ ಹೋರಾಟದ ಫಲವಾಗಿ ಸರ್ವೆ ಕಾರ್ಯ ನಡೆಸಲಾಗಿದೆ.
ಇಲ್ಲಿ 10 ರಿಂದ 50 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಹಕ್ಕುಪತ್ರ ಒದಗಿಸಬೇಕೆನ್ನುವುದು ನಮ್ಮ ಬೇಡಿಕೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ಹೋರಾಟ ಆರಂಭಿಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಗಿತ್ತು. ಅವರು ಪೂರಕವಾಗಿ ಸ್ಪಂದಿಸಿ ಸರ್ವೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅದರಂತೆ ನಮ್ಮ ಸಮ್ಮುಖದಲ್ಲಿ ಸರ್ವೆ ನಡೆದಿದ್ದು ‌ಸರ್ವೆ ವರದಿ ಬಂದ ಬಳಿಕ ಮುಂದಿನ ಹಾದಿ ಸುಗಮವಾಗಲಿದೆ. ಮುಂದೆ ಅಧಿಕಾರಿಗಳಿಗೆ ಒತ್ತಡ ಹೇರುವ ಕೆಲಸ ಮಾಡಲಿದ್ದೇವೆ. ಸಮಿತಿಯ ಎಲ್ಲರಿಗೂ
ಹಕ್ಕುಪತ್ರ ದೊರೆಯುವ ನಿರೀಕ್ಷೆ ಹೆಚ್ಚಿಸಿದೆ ಎಂದು ತಿಳಿಸಿದರು.
ಈ ಸಂದರ್ಭ ನಿವಾಸಿಗಳಾದ
ವಿಜಯ್, ಮಂಜು ಕುಟ್ಟಿ,
ಕವಿತಾ, ಸಂಧ್ಯಾ ಕಾವೇರಪ್ಪ, ರೇಷ್ಮಾ ಮಹದೇವಮ್ಮ, ಭಾರತಿ, ಕುಸುಮ, ದೀಪಿಕಾ, ಮುತ್ತು ಲಕ್ಷ್ಮಿ, ದೇವಿಕಾ, ಭವ್ಯ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!