ಕುಶಾಲನಗರ, ಡಿ 28: ಜಿಲ್ಲೆಯ ಅಮ್ಮತ್ತಿ ಕಾರ್ಮಾಡು, ಗ್ರಾಮ ಪಂಚಾಯತಿ ವ್ಯಾಪ್ತಿಯ ಎಸ್ಸಿ ಎಸ್ಟಿ ಸಮುದಾಯದ ವಸತಿ ನಿರಾಶ್ರಿತರಿಗೆ ಸೂರಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು, ಕೊಡಗು ಜಿಲ್ಲಾ ಜೆಡಿಎಸ್ ಪಕ್ಷದ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಜಯಮ್ಮ ಅಮ್ಮತ್ತಿ ರವರ ನಾಯಕತ್ವದಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೊಡಗು ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರಾದ ಶಿಯಾಬುದ್ದೀನ್ ವಿ.ಪಿ.ಎಸ್. ನಲ್ಲಿ ಹುದಿಕೇರಿ, ಮಡಿಕೇರಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಅಶ್ರಫ್ ಹಾ ಕತ್ತೂರು, ವಿರಾಜಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷರಾದ ಸೈಫುದ್ದೀನ್ ಜಾಮಿಯಾಲ, ಅಲ್ಪಸಂಖ್ಯಾತ ಘಟಕದ ರಾಜ್ಯಪ್ರಧಾನ ಕಾರ್ಯದರ್ಶಿ ಆಬಿದ್ ಹುಸೈನ್ ಮೈಸೂರು, ಮೈಸೂರು ಜಿಲ್ಲಾ ಯುವ ಜೆಡಿಎಸ್ ಮುಖಂಡ ಪ್ರವೀಣ್ ಸಂದರ್ಭ ಹಾಜರಿದ್ದರು.
Back to top button
error: Content is protected !!