ಕುಶಾಲನಗರ, ಡಿ 22: ಸರಕಾರದ ನಿಯಮಾನುಸಾರ ನಾಮಫಲಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಿ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ನೇತೃತ್ವದಲ್ಲಿ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು ಶೇಕಡ 60 ರಷ್ಟು ಭಾಗ ಕನ್ನಡವನ್ನು ಬಳಸಬೇಕೆಂದು ಇರುತ್ತದೆ.
ಕೊಡಗು ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕೆಂದು ಆದೇಶ ಹೊರಡಿಸಿದ್ದರೂ ಕೂಡ ಕೆಲವೊಂದು ಹೊಟೇಲ್, ರೆಸಾರ್ಟ್, ಇನ್ನಿತರ ಅಂಗಡಿ ಮಳಿಗೆಗಳಲ್ಲಿ ನೆಪ ಮಾತ್ರಕ್ಕೆ ಶೇ 10% ಮಾತ್ರ ಕನ್ನಡ ಭಾಷೆ ಹಾಕಿ, ಉಳಿದ ಭಾಗ ಆಂಗ್ಲ ಮತ್ತು ಇನ್ನಿತರ ಭಾಷೆಗಳಲ್ಲಿ ನಾಮಫಲಕ ಹಾಕುವ ಪರಿಪಾಠ ಮುಂದುವರೆದುಕೊಂಡು ಬಂದಿದೆ.
ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆಯಿಂದ ವಾಣಿಜ್ಯ ವಹಿವಾಟುಗಳಿಗೆ, ಪರವಾನಗಿ ನೀಡುವಾಗ ಕಡ್ಡಾಯವಾಗಿ ಶೇಕಡ 60% ಭಾಗ ಕನ್ನಡದಲ್ಲೇ ಇದ್ದರೆ ಮಾತ್ರ ಪರವಾನಗಿ ನೀಡಬೇಕೆಂದು ಸಂಬಂಧಪಟ್ಟವರಿಗೆ ಆದೇಶ ಮಾಡಬೇಕೆಂದು ಮನವಿ ತಿಳಿಸಲಾಗಿದೆ.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯರಾಜ್ ಆಚಾರ್ಯ, ಜಿಲ್ಲಾ ಮಹಿಳಾ ಘಟಕ ಉಪಾಧ್ಯಕ್ಷೆ ಸೌಮ್ಯ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಗೌಡ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಇದ್ದರು.
Back to top button
error: Content is protected !!