ಕುಶಾಲನಗರ, ಡಿ 09: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಕರವೇ ಪ್ರಮುಖರು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಟಿ.ಎ.ನಾರಾಯಣ ಗೌಡರ ಕರ್ನಾಟಕ ರಕ್ಷಣಾ ವೇದಿಕೆ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆನಂದ್ ಕನ್ನಡಿಗ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ಮಿತಿಮೀರಿದೆ. ಮಹಾ ಮೇಳಕ್ಕೆ ಮುಂದಾಗುವ ಮೂಲಕ ಪುಂಡಾಟಿಕೆ ನಡೆಸಿದ ಎಂಇಎಸ್ ವಿರುದ್ದ ಪ್ರತಿಭಟಿಸಿದ ಕರವೇ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಟಿ.ಎ.ನಾರಾಯಣಗೌಡರ ಮನವಿಯಂತೆ ಈಗಾಗಲೆ ಮಾನ್ಯ ಮುಖ್ಯಮಂತ್ರಿಗಳು ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ತಿಳಿಸಿದ್ದು ಆದಷ್ಟು ಬೇಗ ಮೊಕದ್ದಮೆಗಳನ್ನು ಹಿಂಪಡೆಯಬೇಕಿದೆ. ಎಂಇಎಸ್ ನಾಯಕ ಮನೋಹರ್ ಕಲ್ಲಪ್ಪ ಕಿನೇಕರ್, ಅಧ್ಯಕ್ಷ ದೀಪಕ್ ದಳವಿ ಅವರನ್ನು ಗಡಿಪಾರು ಮಾಡುವಂತೆ ಆನಂದ್ ಆಗ್ರಹಿಸಿದರು.
ಈ ಸಂದರ್ಭ ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್ ದೇವಾಂಗ, ಕಾರ್ಯದರ್ಶಿ ರಾಕೇಶ್
ಸಂಘಟನಾ ಕಾರ್ಯದರ್ಶಿ ಜಯಸ್ವಾಮಿ,
ನಗರಾಧ್ಯಕ್ಷ ಡಿ.ಆರ್.ಯೋಗೇಶ್
ನಗರ ಉಪಾಧ್ಯಕ್ಷ ಡಿ.ಎನ್.ರವಿ,
ಸದಸ್ಯ ಎ.ಡಿ.ರವಿಚಂದ್ರ, ರವಿ ಎ ಇದ್ದರು.
Back to top button
error: Content is protected !!