ಕಾರ್ಯಕ್ರಮ

ಬೀಡಾಡಿ ದನಗಳ ಹಾವಳಿ: ಜಾನುವಾರುಗಳನ್ನು ಗೋಶಾಲೆಗೆ ರವಾನಿಸಿದ ಮುಳ್ಳುಸೋಗೆ ಗ್ರಾಪಂ

ಕುಶಾಲನಗರ, ನ 07: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಸಾರ್ವಜನಿಕರು ತಮ್ಮ ಮನೆಯಲ್ಲಿ ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಆವರಣದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾಕದೆ, ತಮ್ಮ ದನಕರುಗಳನ್ನು ಯಾವುದೇ ಮೇಲ್ವಿಚಾರಣೆ ಇಲ್ಲದೆ ರಾಜ್ಯ ಹೆದ್ದಾರಿ ಸೇರಿದಂತೆ ಸಾರ್ವಜನಿಕ ರಸ್ತೆಗಳಲ್ಲಿ ಬಿಡುತ್ತಿರುವುದು ಬಹಳ ದಿನಗಳಿಂದ ಈ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸುವ ಪಾದ ಚಾರಿಗಳು ಹಾಗೂ ವಾಹನ ಸವಾರರಿಗೆ ಬಹುದೊಡ್ಡ ತಲೆ ನೋವಾಗಿ ಮಾರ್ಪಟ್ಟಿತ್ತು. ಅಲ್ಲದೆ ಹಲವು ಬಾರಿ ವಾಹನಗಳು ಅಪಘಾತಕ್ಕೆ ಒಳಪಟ್ಟು ಸಾರ್ವಜನಿಕರಿಗೆ ಹಾಗೂ ದನಕರುಗಳಿಗೆ ಹಾನಿಯಾಗಿರುತ್ತಿದ್ದು, ಸಾರ್ವಜನಿಕರು ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಈ ತಕ್ಷಣವೆ ತಮ್ಮ ದನಕರುಗಳನ್ನು ಸಾರ್ವಜನಿಕ ರಸ್ತೆಯಿಂದ ತಮ್ಮ ಖಾಸಗಿ ಆಸ್ತಿಯಲ್ಲಿ ಸಾಕಲು ವ್ಯವಸ್ಥೆ ಮಾಡಿಕೊಳ್ಳುವಂತೆ ಮುಳ್ಳುಸೋಗೆ ಗ್ರಾಮ ಪಂಚಾಯತಿ ವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಹಲವು ಬಾರಿ ಪ್ರಚಾರ ಮಾಡಲಾಗಿತ್ತು ಹಾಗೂ ಮನೆಮನೆಗಳಿಗೆ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಆದರೂ ಸಹ ನಿರ್ಲಕ್ಷವಹಿಸಿ ಸಾರ್ವಜನಿಕ ರಸ್ತೆಗಳಲ್ಲಿ ದನಗಳನ್ನು ಬಿಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ದಿನ ಗ್ರಾಮ ಪಂಚಾಯತ್ ತಂಡ ಅಖಾಡಕ್ಕೆ ಇಳಿದು ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ಮೇಲ್ವಿಚಾರಣೆ ಇಲ್ಲದೆ ಓಡಾಡುತ್ತಿರುವ ದನ ಕರುಗಳನ್ನು ಹಿಡಿದು ಗೋಶಾಲೆಗೆ ರವಾನಿಸಿದರು. ಈಗಾಗಲೇ ಗೋಶಾಲೆಯೊಂದಿಗೆ ಗ್ರಾಮ ಪಂಚಾಯಿತಿಯು ಒಪ್ಪಂದ ಮಾಡಿಕೊಂಡಿದ್ದು ಪ್ರತಿ ಗೋವಿಗೆ ಕನಿಷ್ಠ ಶುಲ್ಕ ರೂ. 500.00 ಹಾಗೂ ಪ್ರತಿದಿನದ ಮೇವಿನ ಶುಲ್ಕ ರೂ. 200.00 ರಂತೆ ವಸೂಲಿಸಲು ಅನುಮತಿ ನೀಡಿರುತ್ತದೆ. ಆದುದರಿಂದ ಇನ್ನು ಮುಂದೆ ಯಾವುದೇ ಸಾರ್ವಜನಿಕರು ತಮ್ಮ ಗೋವುಗಳನ್ನು ತಮ್ಮ ಆವರಣದಲ್ಲಿ ಸಾಕದೆ ಸಾರ್ವಜನಿಕ ರಸ್ತೆಯಲ್ಲಿ ಬಿಟ್ಟಲ್ಲಿ ಯಾವುದೇ ತಿಳುವಳಿಕೆ ನೀಡದೆ ಸದರಿ ಗೋವುಗಳನ್ನು ಹಿಡಿದು ಗೋಶಾಲೆಗೆ ರವಾನಿಸಲಾಗುವುದು ಎಂಬುದಾಗಿ ಈ ಮೂಲಕ ಮತ್ತೊಮ್ಮೆ ಪ್ರಕಟಣೆ ನೀಡಿರುತ್ತದೆ

ಅವುಗಳನ್ನು ಹಿಡಿದು ಸಾಗಿಸುವ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಿಬ್ಬಂದಿ ವರ್ಗ ಕೈಜೋಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!