ಕುಶಾಲನಗರ, ಸೆ 26: ಗುಡ್ಡೆಹೊಸೂರು ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 29ನೇ ವರ್ಷದ ಗಣೇಶೋತ್ಸವ ಅಂಗವಾಗಿ ಸೋಮವಾರ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ವಿಶೇಷ ಪೂಜಾ ಕೈಂಕರ್ಯ, ಮಧ್ಯಾಹ್ನ ಅನ್ನದಾನ ಬಳಿಕ ಅಲಂಕೃತ ಮಂಟಪದಲ್ಲಿ ಡಿಜೆಯೊಂದಿಗೆ ಗೌರ ಗಣಪತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಗ್ರಾಮದ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಬಿ. ಎಂ. ಪ್ರದೀಪ್, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಅಭಿಷೇಕ್. ಎಂ, ಸಂಚಾಲಕ ದರ್ಶನ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
Back to top button
error: Content is protected !!