ಕುಶಾಲನಗರ, ಸೆ 06: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರಿನ ಸೀಗೆಹಳ್ಳ ಕೆರೆ ತುಂಬಿ ಹರಿದು ಸಮೀಪದ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿರುವ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದಾರೆ. ಸಣ್ಣ
ನೀರಾವರಿ ನಿಗಮಕ್ಕೆ ಒಳಪಡುವ ಕೆರೆಯ ತೂಬನ್ನು ಕಿಡಿಗೇಡಿಗಳು ಸ್ಥಗಿತಗೊಳಿಸಿರುವ ಕಾರಣ ನೀರು ಹರಿಯದೆ ತುಂಬಿ ಜಮೀನುಗಳಿಗೆ ನುಗ್ಗುತ್ತಿದೆ. ಕಳೆದ ಮೂರು ವರ್ಷದಿಂದ ಈ ರೀತಿ ಸಮಸ್ಯೆ ಎದುರಾಗಿದೆ. ಕೂಡಲೆ ನೀರಾವರಿ ನಿಗಮದವರು ಇತ್ತ ಗಮನಹರಿಸಿ ಪರಿಶೀಲಿಸಿ ತೂಬು ಸ್ಥಗಿತಗೊಳಿಸಿದವರ ವಿರುದ್ದ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
Back to top button
error: Content is protected !!