ಕುಶಾಲನಗರ, ಸೆ 06: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಸೆ.9 ರಿಂದ 15 ರವರೆಗೆ ಜೆಸಿ ವೀಕ್ 2025 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿ ಜೋನ್ 14 ರ ಮೀಡಿಯ ಕೋ ಆರ್ಡಿನೇಟರ್ ರಜನಿಕಾಂತ್ ಎಂ.ಜೆ.ತಿಳಿಸಿದರು.
ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಸಿ ಇಂಡಿಯಾ ವತಿಯಿಂದ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದು ಅದರಂತೆ ಜೆಸಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ 7 ದಿನಗಳ ಕಾಲ ಪ್ರತಿ ದಿನ ಎರಡು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸಾರ್ವಜನಿಕವಾಗಿ ಜೆಸಿ ಧ್ವಜಾರೋಹಣ, ಜೆಸಿ ಹೆಮ್ಮೆಯ ಬಗ್ಗೆ ರೀಲ್ಸ್ ರಚಿಸುವುದು, ಕೌಶಲ್ಯಗಳ ಬಗ್ಗೆ ತರಬೇತಿ, ನಿರುದ್ಯೋಗಿಗಳಿಗೆ, ಸೌಲಭ್ಯ ವಂಚಿತರಿಗೆ ಕಾರ್ಯಗಾರ, ಯೋಗ ಶಿಬಿರ, ನೆಟ್ ವರ್ಕಿಂಗ್ ಮೀಟ್, ಕೃತಜ್ಞತೆ ಸಮರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೆಸಿ ಕುಶಾಲನಗರ ಅಧ್ಯಕ್ಷೆ ತೇಜ ದಿನೇಶ್ ಮಾತನಾಡಿ, ಜೆಸಿ ಬಗ್ಗೆ ಬಹಳ ಮಂದಿಗೆ ಮಾಹಿತಿ ಕೊರತೆಯಿದೆ. ಜೆಸಿ ಎಂದರೇನು, ಜೆಸಿಯ ಕಾರ್ಯಚಟುವಟಿಕೆಗಳು ಏನು ಎಂಬುದು ಮನವರಿಕೆ ಮಾಡಲು ಈ ಜೆಸಿ ವೀಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಸಮೂಹವನ್ನು ಗಮನದಲ್ಲಿರಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆ ಮೂಲಕ ಅವರಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಜೆಸಿಯೆಡೆಗೆ ಸೆಳೆಯುವ ಉದ್ದೇಶ ಹೊಂದಲಾಗಿದೆ ಎಂದರು.
ಜೆಸಿ ವತಿಯಿಂದ ಸರಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯವಿದ್ದು ಈ ಸಾಲಿನಲ್ಲಿ ಕುಶಾಲನಗರದ ಐವರು ಮಂದಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದುಕೊಂಡಿದ್ದಾರೆ. ಮುಂದೆಯೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದು ಕೋರಿದರು.
ಜೆಸಿ ಜೋನ್ ವೈಸ್ ಪ್ರೆಸಿಡೆಂಟ್ ಜಗದೀಶ್ ಬಿ ಮಾತನಾಡಿ, ಜೆಸಿ ಸಾಟ್ ಪರೀಕ್ಷೆ ಬಗ್ಗೆ ವಿವರಣೆ ನೀಡಿದರು.
ಗೋಷ್ಠಿಯಲ್ಲಿ ಶನಿವಾರಸಂತೆ ಸಿರಿ ಘಟಕದ ಅಧ್ಯಕ್ಷ ರವಿ ಸಿ, ಸದಸ್ಯರಾದ ಕೋಮಲ, ಕಾವೇರಮ್ಮ ಇದ್ದರು.
Back to top button
error: Content is protected !!