ಕಾರ್ಯಕ್ರಮ

ಚಿಕ್ಕತ್ತೂರು ಶಾಲೆಯಲ್ಲಿ ಮಕ್ಕಳಿಂದ ಗುರುನಮನ: ಶಿಕ್ಷಕರ ದಿನಾಚರಣೆ

ಕುಶಾಲನಗರ, ಸೆ 06 : ಕುಶಾಲನಗರ ತಾಲ್ಲೂಕಿನ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಾಲಾ ವಿದ್ಯಾರ್ಥಿಗಳು ವಿಶೇಷವಾಗಿ ಆಚರಿಸಿದರು.
ಶಾಲೆಯಲ್ಲಿನ ಬ್ಯಾಂಡ್ ಸೆಟ್ ನಿಂದ ಶಿಕ್ಷಕ ಸಮೂಹವನ್ನು ಸ್ವಾಗತಿಸಿ ಬರಮಾಡಿಕೊಂಡ ವಿದ್ಯಾರ್ಥಿಗಳು ಅವರಿಗೆಲ್ಲರಿಗೂ ತಾವೇ ಸಿದ್ದಪಡಿಸಿದ್ದ ಹೂಗುಚ್ಛಗಳನ್ನು ನೀಡಿ ಸ್ವಾಗತಿಸಿದರು.
ನಂತರ ವೇದಿಕೆಗೆ ಕರೆದೊಯ್ದು ಗುರುವಿನ ಮಹತ್ವ ಸಾರುವ ಸಾಲುಗಳನ್ನು ಬರೆದ ಗ್ರೀಟಿಂಗ್ ಗಳೊಂದಿಗೆ ಪೆನ್ನು ಹಾಗೂ ಸಿಹಿ ಕೊಟ್ಟು ವಿದ್ಯಾರ್ಥಿಗಳು ಧನ್ಯತಾ ಭಾವ ಮೆರೆದರು.
ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕರಾದ ಸೌಮ್ಯ, ಪ್ರಕಾಶ್, ಉದಯಪ್ರಕಾಶ್, ಸರೋಜಾ ಹಾಗೂ ಶೋಭಾ ಇದ್ದರು.
ಇದೇ ಸಂದರ್ಭ ಶಾಲಾ ಮಕ್ಕಳು ಶಿಕ್ಷಕರ ದಿನದ ಕುರಿತು ಭಾಷಣ ಹಾಗೂ ಹಾಡುಗಳ ಮೂಲಕ ಗುರುವಿನ ಮಹತ್ವ ಕೊಂಡಾಡಿದರು.
ವರದಿ : ಕೆ.ಎಸ್.ಮೂರ್ತಿ

Related Articles

Leave a Reply

Your email address will not be published. Required fields are marked *

Back to top button
error: Content is protected !!