ಕುಶಾಲನಗರ, ಆ. 26: ಗ್ರಾಮಾಂತರ ಪ್ರದೇಶಗಳಲ್ಲಿ ಗಣಪತಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಸುವ ಸಂದರ್ಭದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಸಾರ್ವಜನಿಕವಾಗಿ ವಿತರಣೆ ಮಾಡುವ ಪ್ರಸಾದ ಮತ್ತು ಅನ್ನಸಂರ್ತಪಣೆ ಮಾಡುವ ಸಂದರ್ಭದಲ್ಲಿ ಆಯಾ ಸಮಿತಿಯವರು ಸ್ಥಳೀಯ ಆರೋಗ್ಯ ಇಲಾಖೆಯ ವತಿಯಿಂದ ತಪಾಸಣೆ ನಡೆಸಿ ವಿನಿಯೋಗ ಮಾಡುವಂತೆ ಮತ್ತು ಗಣಪತಿ ವಿಗ್ರಹ ಗಳನ್ನು ಪ್ರತಿಷ್ಠಾಪನೆ ಮಾಡುವವರು ಸ್ಧಳದವರ ಅನುಮತಿ, ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಅನುಮತಿಯನ್ನು ಪಡೆಯುವ ಮೂಲಕ ವ್ಯಾಪ್ತಿಯ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡುವಂತೆ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ ನವರು ತಿಳಿಸಿದ್ದಾರೆ.
ಈಗಾಗಲೇ ಸೂಚನೆ ನೀಡಿರುವಂತೆ ಯಾವುದೇ ರೀತಿಯ ಡಿಜೆಯ ಬಳಕೆ ಮಾಡದಂತೆ, ಮತ್ತು ಪೊಲೀಸ್ ಇಲಾಖೆಯ ನಿಯಮಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಠಾಣಾಧಿಕಾರಿ ರಾಮಚಂದ್ರ ನವರು ತಿಳಿಸಿದ್ದಾರೆ. ಅವರು ಕುಶಾಲನಗರ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಸ್ಧಳಕ್ಕೆ ತೆರಳಿ ಸಮಿತಿಯ ರೊಂದಿಗೆ ಮಾತಾನಾಡಿ ಸೌಹಾರ್ದ ಮನೋಭಾವದೊಂದಿಗೆ ಆಚರಣೆ ನಡೆಸುವಂತೆ ತಿಳಿಸಿದ್ದಾರೆ.
Back to top button
error: Content is protected !!