ಕ್ರೀಡೆ

ಕುಶಾಲನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಹೊನಲು‌ ಬೆಳಕಿನ ಕಬಡ್ಡಿ ಪಂದ್ಯಾಟ: ಅಂತಿಮ ಹಣಾಹಣಿಗೆ ಬಲಿಷ್ಠ ತಂಡಗಳು

ಕುಶಾಲನಗರ,‌ ಮೇ 15: ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಮೂರು ದಿನಗಳ‌ ಕಾಲ ಹಮ್ಮಿಕೊಂಡಿರುವ ಹೊನಲು ಬೆಳಕಿನ ಬಿಜಿಎಸ್ ಕಪ್ ರಾಜ್ಯಮಟ್ಟದ ಕಬ್ಬಡಿ ಹಬ್ಬ ಕ್ರೀಡಾಪ್ರೇಮಿಗಳಿಗೆ ರಸದೌತಣ‌ ನೀಡಿತು.

ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಬಡ್ಡಿ ಹಬ್ಬದಲ್ಲಿ ರಾಜ್ಯಾದ್ಯಂತ 30 ತಂಡಗಳು ಪಾಲ್ಗೊಂಡಿದ್ದವು. ಈ ಕಬಡ್ಡಿ ಹಬ್ಬದಲ್ಲಿ ಪ್ರೋ ಕಬಡ್ಡಿ ಆಟಗಾರರು ಪಾಲ್ಗೊಂಡಿದ್ದು ವಿಶೇಷ ಜನಾಕರ್ಷಣೆಯಾಗಿತ್ತು.

ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ದಾನಿ, ಸಮಾಜ ಸೇವಕ ಕಿರಗಂದೂರು ಪದ್ಮನಾಭ, ಯುವ ವೇದಿಕೆ ತಾಲೂಕು ಅಧ್ಯಕ್ಷ ಜೈರಾಜ್, ಜಿಲ್ಲಾ ಖಜಾಂಚಿ ಚಂದ್ರಶೇಖರ್ ಹೇರೂರು, ಸಂಘಟನಾ ಕಾರ್ಯದರ್ಶಿ ಕಿರಣ್, ಪ್ರಮುಖರಾದ ಸಂತೋಷ್, ಅಭಿಷೇಕ್, ಸುನಿತ್ ಕುಮಾರ್, ಗಿರೀಶ್, ಪ್ರವೀಣ್ ಪ್ರೋ ಕಬಡ್ಡಿ ಆಟಗಾರ ಅವಿನಾಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!