ಆರೋಗ್ಯ

ಕುಶಾಲನಗರ ರೋಟರಿ, ಇನ್ನರ್ ವೀಲ್ ವತಿಯಿಂದ ಸರ್ವೈಕಲ್ ಕ್ಯಾನ್ಸರ್ ಲಸಿಕೆ ಶಿಬಿರ

ಕುಶಾಲನಗರ, ಆ 10: ರೋಟರಿ ಕ್ಲಬ್ ಕುಶಾಲನಗರ ಹಾಗೂ ಇನರ್ ವೀಲ್ ಕ್ಲಬ್ ಕುಶಾಲನಗರ ಸಂಯುಕ್ತವಾಗಿ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ತಡೆಗಟ್ಟುವ ಲಸಿಕೆ ಶಿಬಿರವನ್ನು ದಿನಾಂಕ 9/08/2025 ರಂದು ಕುಶಾಲನಗರ ರೋಟರಿ ಹಾಲ್ ನಲ್ಲಿ ಆಯೋಜಿಸಲಾಯಿತು.

ಅನೇಕ ಮಕ್ಕಳು,ಯುವತಿಯರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಿ ಅತ್ಯಂತ ಕಡಿಮೆ ದರದಲ್ಲಿ ಒಟ್ಟು 120 ಚುಚ್ಚು ಮದ್ದನ್ನು ನಿಡಲಾಯಿತು
ಈ ಶಿಬಿರವನ್ನು ಉದ್ಘಾಟಿಸಿದ ಡಾ. ಹರಿ ಶೆಟ್ಟಿ ಅವರು ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆಯ ಮಹತ್ವವನ್ನು ವಿವರಿಸಿದರು ಹಾಗೆ ಸ್ವತಃ ತಾವೇ ಎಲ್ಲರಿಗೂ ಮದ್ದನ್ನು ಹಾಕಿದರು..

“ಗರ್ಭಕಂಠ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿದೆ. HPV ವೈರಸ್‌ನಿಂದ ಉಂಟಾಗುವ ಈ ರೋಗವನ್ನು ಸರಿಯಾದ ವಯಸ್ಸಿನಲ್ಲಿ ನೀಡುವ ಲಸಿಕೆಯಿಂದ ಬಹುಮಟ್ಟಿಗೆ ತಡೆಯಬಹುದು. 9 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದರೆ ಭವಿಷ್ಯದಲ್ಲಿ ಈ ರೋಗದ ಅಪಾಯ ಕಡಿಮೆ ಆಗುತ್ತದೆ. ಜಾಗೃತಿ ಹಾಗೂ ಮುನ್ನೆಚ್ಚರಿಕೆಯೇ ಈ ರೋಗ ನಿವಾರಣೆಗೆ ಪ್ರಮುಖ ಅಸ್ತ್ರ.”
ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆ ಯೋಜನೆ ರೋಟರಿ ಮತ್ತು ಇನರ್ ವೀಲ್ ಸಂಸ್ಥೆಯ ಜಿಲ್ಲಾ ಯೋಜನೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಶ್ರೀ ಮನು ಪೆಮ್ಮಯ್ಯ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕರು ಶ್ರೀಮತಿ ರೇಷ್ಮಾ ನವೀನ್, ನಿಕಟ ಪೂರ್ವ ಅಧ್ಯಕ್ಷರಾದಂತ ಶ್ರೀಮತಿ ಚಿತ್ರ ರಮೇಶ್ , ಖಜಾಂಚಿ ಶ್ರೀಮತಿ ಶೀನಾ ಪ್ರಕಾಶ್ ಹಾಗೂ ಸಂಸ್ಥೆಯ ಸದಸ್ಯರುಗಳಾದ ಶ್ರೀಮತಿ ವಿನುತಾ, ಅಂಕಿತ, ಮೌನ ಭೋಜಣ್ಣ ಮತ್ತಿತರು ಹಾಜರಿದ್ದರು .

Related Articles

Leave a Reply

Your email address will not be published. Required fields are marked *

Back to top button
error: Content is protected !!