ಕಾರ್ಯಕ್ರಮ

ಚೌಡೇಶ್ವರಿ ದೇವಾಲಯದಲ್ಲಿ ಜನಿವಾರ ಹಬ್ಬ ಆಚರಣೆ

ಕುಶಾಲನಗರ,, ಆ. 9: ಕುಶಾಲನಗದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಜನಿವಾರ ಹಬ್ಬ ಆಚರಣೆ ಸಂಪ್ರದಾಯದಂತೆ ಶ್ರಧ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದ ನಂತರ ಸಾಮೂಹಿಕವಾಗಿ ಭಾಗವಹಿದ ದೇವಾಂಗ ಕುಲಭಾಂದವರು ಸೇರಿ ಜನಿವಾರ ಧರಿಸುವ ಮೂಲಕ ಹಬ್ಬ ಆಚರಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್ ಸೇರಿದಂತೆ ಸಮಿತಿಯ ಸದಸ್ಯರು ಕುಲಭಾಂದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!