ಪ್ರತಿಭಟನೆ

ಕರವೆ ಯಿಂದ ಪುರಸಭೆಗೆ ಮುತ್ತಿಗೆ ಎಚ್ಚರಿಕೆ

ಕುಶಾಲನಗರ, ಆ 06:ಕಣ್ಣಿದು ಕುರುಡರಂತೆ ವರ್ತಿಸುತ್ತಿರುವ ಪುರಸಭೆಗೆ ಸದ್ಯದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಎಚ್ಚರಿಸಿದ್ದಾರೆ.

ಕುಶಾಲನಗರದಲ್ಲಿ ಪ್ರತಿಬಾರಿಯೂ ಕರವೇಯಿಂದ ಎಚ್ಚರಿಕೆ ಗಂಟೆಯನ್ನು ಕೊಡುತ್ತಿದ್ದರು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಕುಶಾಲ್ನಗರದ ಹೃದಯ ಭಾಗದಲ್ಲಿ ಹುಂಡೈ ಶೋರೂಮ್ ನ ದೊಡ್ಡ ಜಾಹಿರಾತೊಂದು ಹಾಕಿದ್ದು ಅದರಲ್ಲಿ ಶೇಕಡ 20 ಭಾಗ ಕನ್ನಡವಿದ್ದು ಉಳಿದದ್ದು ಆಂಗ್ಲ ಭಾಷೆಯಲ್ಲಿದೆ ಪ್ರತಿದಿನ ಎದ್ದು ನೋಡಿದರೆ ಆಂಗ್ಲಭಾಷೆಗೆ ಕಾಣುತ್ತಿದೆ ಹಿಂದೆ ಇದ್ದ ಮುಖ್ಯ ಅಧಿಕಾರಿಗಳು ಯಾವುದೇ ಪರವಾನಗಿ ನವೀಕರಣ ಮಾಡುವಾಗ ಆ ಅಂಗಡಿ ಮುಂಗಟ್ಟುಗಳ ನಾಮಫಲಕವನ್ನು ನೋಡಿ ನಂತರ ನವೀಕರಣ ಮಾಡುತ್ತಿದ್ದರು ಆದರೆ ಈಗ ಬಂದ ಪುರಸಭೆಯ ಮುಖ್ಯ ಅಧಿಕಾರಿಗೆ ಇದರ ಗಮನವಿಲ್ಲ ಎಂದು ಕಾಣುತ್ತಿದೆ ಆದ್ದರಿಂದ ಕನ್ನಡ ನಾಮಪಲಕವಿಲ್ಲದೆ ಆಂಗ್ಲ ಭಾಷೆಯಲ್ಲಿ ಹರಿದಾಡುತ್ತಿರುವ ಜಾಹೀರಾತುಗಳನ್ನು ಸರಿಪಡಿಸದಿದ್ದಲ್ಲಿ ಪುರಸಭೆಯ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!