ಸಭೆ

ಕೂಡುಮಂಗಳೂರು ಗ್ರಾ.ಪಂ ವಿಶೇಷ ಸಭೆ: ನಿವೇಶನ ರಹಿತರ ಪಟ್ಟಿ ಪರಿಶೀಲನೆ

ಕುಶಾಲನಗರ, ಜು 22:
ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ನಿವೇಶನ ರಹಿತರ ಪಟ್ಟಿಯನ್ನು ಪರಿಶೀಲನೆ ನಡೆಸುವ ದೃಷ್ಟಿಯಿಂದ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಕೂಡುಮಂಗಳೂರು ಗ್ರಾ.ಪಂ ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿರುವ ಅಂತ ನಿವೇಶನ ರಹಿತರ ಪಟ್ಟಿಯನ್ನು ಸದಸ್ಯರು ಪರಿಶೀಲಿಸುವಂತೆ ತಿಳಿಸಲಾಯಿತು ಪಟ್ಟಿಯಲ್ಲಿ ಸ್ವಂತ ಮನೆ ಇದ್ದವರು ಕೂಡ ಅರ್ಜಿ ಸಲ್ಲಿಸಿದ್ದು ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲು ತಿಳಿಸಲಾಯಿತು ಪ್ರಸ್ತುತ ತಯಾರಾಗಿರುವ ಪಟ್ಟಿಯು 2017 ರ ಪಟ್ಟಿಯಾಗಿರುವ ಹಿನ್ನಲೆ ಹಾಲಿ ಪಟ್ಟಿಯ ಜೊತೆಗೆ ಹೊಸದಾಗಿ ಅರ್ಜಿ ಹಾಕಲು ಅವಕಾಶ ಕಲ್ಪಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಹಾಗೆಯೇ ಕೆಲವು ಸದಸ್ಯರು ಮುಂದಿನ ಅವಧಿಯಲ್ಲಿ ಪಟ್ಟಿಯನ್ನು ತಯಾರಿಸಿ ಈಗ ಸದ್ಯಕ್ಕೆ ಸ್ಥಗಿತ ಮಾಡುವಂತ ಒತಾಯಿಸಿದರು..

Related Articles

Leave a Reply

Your email address will not be published. Required fields are marked *

Back to top button
error: Content is protected !!